HomePage_Banner
HomePage_Banner
HomePage_Banner
HomePage_Banner

ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ನಲ್ಲಿ ಕಳವು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ವಿಟ್ಲ:  ಪುತ್ತೂರು – ವಿಟ್ಲ ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಜ.೨೪ರಂದು ತಡರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ನಡೆದಿದೆ.


 ಪೆಟ್ರೋಲ್ ಬಂಕ್ ನ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು  ಕಂಪ್ಯೂಟರ್ ಮತ್ತು ಸಿಸಿ ಕ್ಯಾಮರಾ ಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದು,  ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದಾರೆ. ಕಳ್ಳರು ಸುಮಾರು 2 ಲಕ್ಷ ರೂಪಾಯಿ ಮೌಲ್ಯದ   ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಟ್ಲ ಠಾಣಾ ಪೊಲೀಸರು  ಸ್ಥಳಕ್ಕೆ ಆಗಮಿಸಿ ಮಾಹಿತಿ‌ ಸಂಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.