HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಸ್ಕೌಟ್ ನಿಶ್ಚಲ್ ಕೆ ಜೆ “Best Performer of Yuva Fit Bit”

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ ಸ್ಕೌಟ್ & ಗೈಡ್ಸ್ ಸಂಸ್ಥೆಯು ನಮ್ಮ ದೇಶದ ಎಲ್ಲಾ ಸ್ಕೌಟ್ & ಗೈಡ್ಸ್‌ಗಳಿಗೆ ಕೊವಿಡ್ – ೧೯ ಸಂದರ್ಭದಲ್ಲಿ ಮಕ್ಕಳನ್ನು ಚುರುಕುಗೊಳಿಸುವ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನಮ್ಮ ದೇಶ ಕಂಡ ಅಪ್ರತಿಮ ಯುವ ನೇತಾರರಾದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲಾಗಿರುವಾಗ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಯುವಾನ ಸ್ಕೌಟ್ ಚಟುವಟಿಕೆಯಲ್ಲಿ ಯುವ ಟ್ಯಾಲೆಂಟ್ ಹಬ್ ೭ ದಿನಗಳ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ೧೦ನೇ ತರಗತಿಯ ರಾಜ್ಯ ಪುರಸ್ಕಾರ ಸ್ಕೌಟ್ ವಿದ್ಯಾರ್ಥಿ ನಿಶ್ಚಲ್ ಕೆ ಜೆ ಭಾಗವಹಿಸಿ ಎರಡನೇ ದಿನದ ಕಾರ್ಯಕ್ರಮದಲ್ಲಿ “Best Performer of Yuva Fit Bit” ಎಂಬ ಬಿರುದಿಗೆ ಪಾತ್ರರಾಗಿರುತ್ತಾರೆ.

ಈತ ಪೆರಾಜೆ ಗ್ರಾಮದ ಕೆರಂಬಿ ಮನೆಯ ಇಂಜಿನಿಯರ್ ಜನಾರ್ಧನ ಗೌಡ ಮತ್ತು ಜ್ಯೋತಿ ದಂಪತಿಗಳ ಸುಪುತ್ರ. ಈ ಚಟುವಟಿಕೆಯಲ್ಲಿ ದೇಶದ ನಾನಾ ರಾಜ್ಯಗಳ ಒಟ್ಟು ೧೬೩೧ ವಿದ್ಯಾರ್ಥಿಗಳು ಭಾಗವಹಿಸಿದ್ದು ಓರ್ವ ವಿದ್ಯಾರ್ಥಿಗೆ ಮಾತ್ರ ನೀಡಲಾಗಿರುವ “Best Performer” ಎಂಬ ಬಿರುದನ್ನು ಇವರು ಪಡೆದಿರುತ್ತಾರೆ. ಈ ಚಟುವಟಿಕೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಸ್ಕೌಟ್ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.