ಕಡಬ ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಸಚಿವ ಎಸ್. ಅಂಗಾರ
ಅವರಿಗೆ ಕಡಬ ವಿ.ಹಿಂ.ಪ ವತಿಯಿಂದ ಮನವಿ

ಕಡಬ: ಹಲವು ವರ್ಷಗಳಿಂದ ಕಡಬ ತಾಲೂಕಿನಾದ್ಯಂತ ಸಾಕಲು ಅಶಕ್ತವಾದ ಗೋವುಗಳಿಗೆ ರಕ್ಷಣೆ ಒದಗಿಸಲು ಜಿಲ್ಲೆಯಿಂದ ಹೊರಗಿನ ಗೋಶಾಲೆಗಳಿಗೆ ರಾಸುಗಳನ್ನು ಸಾಗಿಸುತ್ತಿದ್ದು ಇದರಿಂದ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಕಡಬ ತಾಲೂಕಿನಲ್ಲಿ ಗೋ ಶಾಲೆಯನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಕಡಬ ವಿಶ್ವ ಹಿಂದು ಪರಿಷತ್ ಬಜರಂಗದಳ ವತಿಯಿಂದ ಕಡಬ ಭೇಟಿ ನೀಡಿದ ಶಾಸಕ ಎಸ್. ಅಂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ವತಿಯಿಂದ ಅಶಕ್ತ ಗೋವುಗಳನ್ನು ಜಿಲ್ಲೆಯಿಂದ ಹೊರಗಿನ ಗೋ ಶಾಲೆಗಳಿಗೆ ರಾಸುಗಳಿಗೆ ಸಾಗಿಸುತ್ತಿದ್ದು ವಾಹನ ಬಾಡಿಗೆ ಮುಂತಾದವುಗಳಿಂದ ಬಾರಿ ಖಚರ್ು ಉಂಟಾಗುತ್ತಿದೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಎಲ್ಲಿಯಾದರೂ ಸ್ಥಳಗಳನ್ನು ಗುರುತಿಸಿ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದಶರ್ಿ ಪ್ರಮೋದ್ ರ್ಯ ನಂದುಗುರಿ, ವಿ.ಹಿಂ.ಪ ಉಪಾಧ್ಯಕ್ಷ ಸಂತೋಷ್ ಕುಮಾರ್ ಕೋಡಿಬೈಲು, ಸುರೇಶ್ ಕೋಟೆಗುಡ್ಡೆ, ರವಿ ಪಾದರೆ, ಬಜರಂಗದಳದ ಮಾಜಿ ಸಂಚಾಲಕ ವಾಸುದೇವ ಕೊಲ್ಲೆಸಾಗು, ಗೋ ರಕ್ಷಕ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ, ಸುರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಸಾಪ್ತಾಯಿಕ ಮಿಲನ್ ತಿಲಕ್ ನಂದುಗುರಿ ಉಪಸ್ಥಿತರಿದ್ದರು