HomePage_Banner
HomePage_Banner
HomePage_Banner
HomePage_Banner

ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ‘ಗಣರಾಜ್ಯೋತ್ಸವ ಆಚರಣೆ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1




ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 72ನೇ ವರ್ಷದ ‘ಗಣರಾಜ್ಯೋತ್ಸವ ಆಚರಣೆ’ ಕಾಲೇಜಿನ ಆವರಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ಗೌಡ ಪಿ. ಧ್ವಜಾರೋಹಣ ನೆರವೇರಿಸಿ ‘ಗಣರಾಜ್ಯೋತ್ಸವ’ದ ಸಂದೇಶ ನೀಡಿದರು. ನಂತರ ರಾಜ್ಯಶಾಸ್ತ್ರ ಉಪನ್ಯಾಸಕರಾದ ಲಕ್ಷ್ಮಿಕಾಂತ ರೈ ಅನಿಕೂಟೇಲ್ ‘ಪ್ರಜಾಪ್ರಭುತ್ವ’ದ ಆಶಯ ಹಾಗೂ ಮಹತ್ವವನ್ನು ತಿಳಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಬ್ದುಲ್ ಕುಂಹಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಐವನ್ ಎಫ್ ಲೋಬೋ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಜಯರಾಮ್, ಡಾ.ಸುಕೇಶ್, ಡಾ.ಗೋಪಾಲಕೃಷ್ಣ ಕೆ, ಕನ್ನಡ ಪ್ರಾಧ್ಯಾಪಕರಾದ ಪ್ರೊ. ಸುಜಾತಾ ಎಂ.ಕೆ, ಇತಿಹಾಸ ಉಪನ್ಯಾಸಕ ವಸಂತ್ ಕುಮಾರ್ ಹಾಡಿಂಜೆ, ಅರ್ಥಶಾಸ್ತ್ರ ಉಪನ್ಯಾಸಕರಾದ ವೆಂಕಪ್ಪ ನಾಯ್ಕ, ಆಫೀಸ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.