ಪುತ್ತೂರು : ಕನ್ನಡ ಸೇನೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ೨೪ ತಂಡಗಳ ಅಂಡರ್ ಆರ್ಮ್ಕ್ರಿಕೆಟ್ ಪಂದ್ಯಾಟ ಕನ್ನಡ ಸೇನೆ ಟ್ರೋಫಿ 2021, ಜ.29,30,31ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಹಾಗೂ ಪುತ್ತೂರು ಪುರಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ ನಡೆಯಲಿದೆ.
ಜ.೨೯ರಂದು ಅಪರಾಹ್ನ ೩.೪೫ರಂದು ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್ ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ನಗರಸಭಾಧ್ಯಕ್ಷ ಜೀವಂಧರ್ ಜೈನ್, ಪೌರಾಯುಕ್ತೆ ರೂಪಾ ಜೆ.ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕರುಗಳಾದ ದೇವಪ್ಪ ಉಪ್ಪಳಿಗೆ, ಎನ್.ಸಂಜೀವ ರೈ ಅರಂಭ್ಯ, ಗಂಗಾಧರ ಗೌಡ ಕರಂದ್ರೋಟು, ಜೆರೋಮಿಯಸ್ ಪಾಸ್, ಬಿ.ಐತ್ತಪ್ಪ ನಾಯ್ಕ್, ಯೂಸುಫ್ ಎಂ. ಮಿತ್ತೂರು ರವರಿಗೆ ಸನ್ಮಾನ ನಡೆಯಲಿದೆ.
ಜ.೩೦ರಂದು ಅಪರಾಹ್ನ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಉಪಾದ್ಯಕ್ಷೆ ವಿದ್ಯಾ ಆರ್ ಗೌರಿ, ಬಜರಂಗದಳ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮಾಜಿ ಆಡಳಿತ ಮೋಕ್ತೇಸರ ಎನ್.ಕೆ.ಜಗನ್ನೀವಾಸ ರಾವ್, ಪುತ್ತೂರು ವರ್ತಕ ಸಂಘದ ಮಾಜಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ಭಾಗವಹಿಸಲಿದ್ದಾರೆ. ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ವೈದ್ಯ ಗೌತಮ್ ಬಿ., ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಬೆಟ್ಟಂಪಾಡಿ ಶ್ರೀದುರ್ಗಾ ಕ್ಲಿನಿಕ್ನ ಡಾ. ಶ್ರೀಕೃಷ್ಣ ಭಟ್, ರೆಂಜ ಶ್ರೀದೇವಿ ಕ್ಲಿನಿಕ್ನ ಡಾ.ಸತೀಶ್ ರಾವ್, ನೆಹರೂನಗರ ಸಂಜೀವಿನಿ ಕ್ಲಿನಿಕ್ನ ಡಾ.ಕೆ.ರವಿನಾರಾಯಣ ಹಿರಿಯ ವೈದ್ಯಕೀಯ ಸಲಹೆಗಾರ ಕೆ.ನರಸಿಂಹ ಭಟ್ರವರಿಗೆ ಸನ್ಮಾನ ನಡೆಯಲಿದೆ.
ಜ.೩೧ರಂದು ಬೆಳಿಗ್ಗೆ ಪುತ್ತೂರು ಮಿನಿವಿಧಾನ ಸೌಧದ ಎದುರಿನ ಅಮರ್ ಜವಾನ್ ಜ್ಯೋತಿ ಬಳಿ ಮಾಜಿ ಸೈನಿಕರಾದ ಮಂಜುನಾಥ್ ಝಡ್ ಬಿಳಿನೆಲೆ, ಉಮೇಶ್ ಪೂಜಾರಿ ಪುತ್ತೂರು, ಚಂದ್ರಶೇಖರ ಎಚ್.ಆರ್.ಕೊಪ್ಪ, ರತ್ನಾಕರ ರೈ ಅಂಚಿಕಟ್ಟೆ ಇರ್ದೆ, ನಾರಾಯಣ ಕೆ.ಭಟ್ ನೆಹರೂನಗರ, ತೇಜ್ ಕುಮಾರ್ ಗೌಡ ಮುರ ರವರಿಗೆ ಸನ್ಮಾನ ನಡೆಯಲಿದೆ.
ಕನ್ನಡ ಜಾಗೃತಿ ಸಮಾವೇಶ : ಜ.೩೧ರಂದು ಪುತ್ತೂರು ಪುರಭವನದಲ್ಲಿ ನಡೆಯುವ ಕನ್ನಡ ಜಾಗೃತಿ ಸಮಾವೇಶವನ್ನು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಉದ್ಘಾಟಿಸಲಿದ್ದಾರೆ. ಪುತ್ತೂರು ತಹಶೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಪೊಲೀಸ್ ಇಲಾಖಾ ಸಿಬ್ಬಂದಿಗಳಾದ ಪುತ್ತೂರು ನಗರ ಠಾಣಾ ಪಿ.ಐ ಎಂ.ಗೋಪಾಲ ನಾಯ್ಕ, ಪುತ್ತೂರು ಮಹಿಳಾ ಠಾಣಾ ಪಿಐ ತಿಮ್ಮಪ್ಪ ನಾಯ್ಕ, ಪುತ್ತೂರು ಸಂಚಾರಿ ಠಾಣಾ ಪಿಎಸ್ಐ ರಾಮ ನಾಯ್ಕ, ಪುತ್ತೂರು ಮಹಿಳಾ ಠಾಣಾ ಪಿಎಸ್ಐ ಶೇಷಮ್ಮ ಕೆ.ಎಸ್, ಪುತ್ತೂರು ಗ್ರಾಮಾಂತರ ಸಿಪಿಐ ಉಮೇಶ್ ಉಪ್ಪಳಿಗೆ ಹಾಗೂ ಆಶಾ ಕಾರ್ಯಕರ್ತೆಯರಾದ ಚಾರ್ವಕ ಪ್ರೈಮರಿ ಹೆಲ್ತ್ ಸೆಂಟರ್ನ ಗೀತಾ ಕಾಣಿಯೂರು, ಆಲಂಕಾರು ಪ್ರೈಮರಿ ಹೆಲ್ತ್ ಸೆಂಟರ್ನ ತಾರಾ ಬಿ.ಕೊಲ, ಪಾಲ್ತಾಡಿ ಪ್ರೈಮರಿ ಹೆಲ್ತ್ ಸೆಂಟರ್ನ ಶ್ಯಾಮಲ ರೈ ಕೊಳ್ತಿಗೆ, ಇರ್ದೆ,ಪಾಣಾಜೆ ಪ್ರೈಮರಿ ಹೆಲ್ತ್ ಸೆಂಟರ್ನ ದೇವಕಿ, ತೆಂಕಿಲ ಪ್ರೈಮರಿ ಹೆಲ್ತ್ ಸೆಂಟರ್ನ ಚಂದ್ರಾವತಿ ರವರಿಗೆ ಸನ್ಮಾನ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕನ್ನಡ ಸೇನೆಯ ದ.ಕ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಎ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.