ಪುತ್ತೂರು: ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಎಸ್.ಡಿ.ಎಂ.ಸಿ ಯ ಸದಸ್ಯರಾದ ನಿವೃತ್ತ ಎಸ್.ಪಿ.ಶ್ರೀ ರಾಮ್ ದಾಸ್ ರವರು ಧ್ವಜಾರೋಹಣಗೈದು, ವಿದ್ಯಾರ್ಥಿಗಳಿಗೆ ಶುಭಹಾರೈಸಿ,ಎಲ್ಲರೂ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಳ್ಳಲು ಕರೆಕೊಟ್ಟರು. ಎಸ್.ಡಿ.ಎಂ.ಸಿ ಯ ಸದಸ್ಯರಾದ ಇಂದುಶೇಖರ್, ಶಿಕ್ಷಕವೃಂದ ,ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ಮೌಲಾನ ಆಜಾದ್ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರು ಎಸ್ ಡಿ ಎಂ ಸಿ ಅಧ್ಯಕ್ಷರು ಶಿಕ್ಷಕ ಬಳಗ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಜಲಜಾಕ್ಷಿ.ಕೆ.ಎಂ ವಂದಿಸಿದರು.ನಂತರ ಧ್ವಜಾರೋಹಣ ನೆರವೇರಿಸಿದ ಶ್ರೀ ರಾಮದಾಸ್ ರವರು ನೀಡಿದ ಸಿಹಿತಿಂಡಿಯನ್ನು ಹಂಚಲಾಯಿತು.