ಪುತ್ತೂರು: ಎಸ್ಸೆಸ್ಸೆಫ್ ಬನ್ನೂರು ಶಾಖೆಯ ವತಿಯಿಂದ ಗಣರಾಜ್ಯೋತ್ಸವನ್ನು ರೈತರ ಹೋರಾಟಕ್ಕೆ ಬೆಂಬಲಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ರಾಜ್ಯ ಸಮಿತಿಯ ಸೆರ್ಕ್ಯೂಲರ್ ಅನುಸಾರವಾಗಿ `ಕಿಸಾನ್ ರಿಪಬ್ಲಿಕ್’ ಕಾರ್ಯಕ್ರಮವನ್ನು ಬನ್ನೂರು ಮಾರ್ನಡ್ಕ ಕೃಷಿಕರೊಬ್ಬರ ಅಡಿಕೆ ತೋಟದಲ್ಲಿ ನಡೆಯಿತು. ಕೃಷಿಕ ಶರಫುದ್ದೀನ್ ರವರು ಧ್ವಜಾರೋಹಣಗೈದರು.
ಎಸ್.ವೈ.ಎಸ್. ಬನ್ನೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ರವರು ದುಆ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಉಲ್ಪಾತುಲ್ಲಾ, ಬನ್ನೂರು ಸುನ್ನೀ ಸೆಂಟರ್ ಸಮಿತಿಯ ಅಧ್ಯಕ್ಷ ಪಾರೊಕ್ ಬನ್ನೂರು, ಪುತ್ತೂರು ಡಿವಿಷನ್ ಉಪಾಧ್ಯಕ್ಷ ಸಮೀರ್ ಬನ್ನೂರು, ಸೆಕ್ಟರ್ ಕ್ಯಾ.ಕಾರ್ಯದರ್ಶಿ ಬಾತೀಶ್ ಬನ್ನೂರು, ಶಾಖಾ ಕಾರ್ಯದರ್ಶಿ ವಾರೀದ್, ಕಾರ್ಯಕರ್ತರಾದ ಹನೀಫ್, ಖಾದರ್ ಸುಹೈಲ್, ಸಿನಾನ್, ಮುಫೀದ್, ನಿಝಾಮ್ ಉಪಸ್ಥಿತರಿದ್ದರು. ಶಾಖಾ ಕಾರ್ಯಕರ್ತ ಅಬ್ದುಲ್ ಹಕ್ಕ್ ಪ್ರತಿಜ್ಞಾ ವಿಧಿ ಭೋಧಿಸಿದರು. ಶಾಖಾಧ್ಯಕ್ಷ ಜಬೀರ್ ಬನ್ನೂರು ಸ್ವಾಗತಿಸಿ, ಪುತ್ತೂರು ಸೆಕ್ಟರ್ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ವಂದಿಸಿದರು. ರಾಷ್ಟ್ರಗೀತೆ ಹಾಡಿದ ಬಳಿಕ ಸಿಹಿ ವಿತರಿಸಲಾಯಿತು.