ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಜ.೨೫ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ನಡೆಯಿತು.
ಕಾಜರೊಕ್ಕು ಎಂಬಲ್ಲಿಂದ ಹಸಿರುವಾಣಿ ಮೆರವಣಿಗೆಯೂ ಚೆಂಡೆ ವಾದ್ಯದೊಂದಿಗೆ ರಾಮಕುಂಜ ದೇವಸ್ಥಾನಕ್ಕೆ ಆಗಮಿಸಿತು. ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಈರಕೀಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ ಕಟ್ಟೆ, ಶಾರದಾಂಬಾ ಕಟ್ಟೆ, ಕೆದಿಲ ಕಟ್ಟೆ ಸೇರಿದಂತೆ ಈ ದಾರಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಂಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕೀಮಠ, ಉತ್ಸವ ಸಮಿತಿ ಗೌರವಾಧ್ಯಕ್ಷ ಮಾಧವ ಆಚಾರ್ಯ ಇಜ್ಜಾವು, ಅಧ್ಯಕ್ಷ ಕೃಷ್ಣಮೂರ್ತಿ ಕಲ್ಲೇರಿ, ಕಾರ್ಯದರ್ಶಿ ಸತೀಶ್ ಭಟ್ ಎಂ., ಉಪಾಧ್ಯಕ್ಷರುಗಳಾದ ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ರಾಮಭಟ್ ಬೃಂದಾವನ, ತಿಮ್ಮಪ್ಪ ಗೌಡ ಆನ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಮೇಶ್ ರೈ ರಾಮಜಾಲುಗುತ್ತು, ಯೋಗೀಶ ಕುಲಾಲ್ ಅಜ್ಜಿಕುಮೇರು, ಜನಾರ್ದನ ಗೌಡ ಬಾಂತೊಟ್ಟು, ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಶೈಲಜಾ ಆಳ್ವಗುತ್ತು, ವಿಮಲಾ ಕರುಣಾಕರ ಆರಿಂಜ, ಉತ್ಸವ ಸಮಿತಿ ಸದಸ್ಯರುಗಳಾದ ನಾರಾಯಣ ಭಟ್ ತೋಟ, ಸೇಸಪ್ಪ ರೈ ಬಾಂತೊಟ್ಟು, ರಾಧಾಕೃಷ್ಣ ಕೆ.ಎಸ್., ಗುಮ್ಮಣ್ಣ ಗೌಡ, ಮೋನಪ್ಪ ಕುಲಾಲ್, ಲಕ್ಷ್ಮೀನಾರಾಯಣ ರಾವ್, ಕೃಷ್ಣಮೂರ್ತಿ ಕಲ್ಲೂರಾಯ, ಪ್ರಶಾಂತ್ ಆರ್.ಕೆ., ತೇಜಕುಮಾರ್ ರೈ, ಶರತ್ ಕೆದಿಲ, ರವಿ ಕೆದಿಲಾಯ, ಪೂವಪ್ಪ ಗೌಡ ಸಂಪ್ಯಾಡಿ, ವೆಂಕಟೇಶ್ವರ ಭಟ್ ಹೂಂತಿಲ, ಶೇಖರ ಗೌಡ ಕಟ್ಟಪುಣಿ, ರಮೇಶ್ ಎನ್.ಸಿ., ವೀರೇಂದ್ರ ಪಾಲೆದಡ್ಡ, ಉಮೇಶ ಕಲ್ಲೇರಿ, ಸುಶೀಲ ವಳೆಂಜ, ಯತೀಶ ಬಾನಡ್ಕ, ಸೂರಪ್ಪ ಕುಲಾಲ್ ಬರಮೇಲು ಸೇರಿದಂತೆ ಗ್ರಾಮಸ್ಥರು, ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಜ.27ರಂದು ದರ್ಶನ ಬಲಿ
ಜ.೨೭ರಂದು ಬೆಳಿಗ್ಗೆ ನಂದಾದೀಪೋತ್ಸವ, ಉತ್ಸವ, ಮಧ್ಯಾಹ್ನ ದರ್ಶನಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೇವರ ಬಲಿ ಹೊರಡುವುದು, ದಂಡತೀರ್ಥ ಕೆರೆ ಉತ್ಸವ, ದೇವರಗುಡ್ಡೆ, ತಾವೂರು ದಾರಿಯ ಕಟ್ಟೆಪೂಜೆಗಳು, ಶ್ರೀರಾಮ ಸಂದರ್ಶನೋತ್ಸವ ನಡೆಯಲಿದೆ. ಬಳಿಕ ಶಾಲಾ ಕಾಲೇಜು ಬಳಿಯ ಕಟ್ಟೆಪೂಜೆಗಳು, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆ ಉತ್ಸವ, ಮಹಾಪೂಜೆ ನಡೆಯಲಿದೆ.