HomePage_Banner
HomePage_Banner
HomePage_Banner
HomePage_Banner

ಮಂಗಳಪದವು: ಎಸ್ಸೆಸ್ಸೆಫ್ ಕಿಸಾನ್ ರಿಪಬ್ಲಿಕ್ ಡೇ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಎಸ್ಸೆಸ್ಸೆಫ್ ಮಂಗಳಪದವು ಶಾಖೆಯ ವತಿಯಿಂದ ಸೆಕ್ಟರ್ ಸಹಕಾರದೊಂದಿಗೆ ರೈತ ಗಣರಾಜ್ಯೋತ್ಸವ “ಕಿಸಾನ್ ರಿಪಬ್ಲಿಕ್ ಡೇ” ಕಾರ್ಯಕ್ರಮ ಜ.26ರಂದು ಮಂಗಳಪದವು ಜಂಕ್ಷನಲ್ಲಿ ನಡೆಯಿತು. ಊರಿನ ಕೃಷಿಕ ಮೊದು ಕುಂಞಿ ಒಕ್ಕೆತ್ತೂರು ಮೂಲೆ ಧ್ವಜಾರೋಹಣಗೈದರು. ಅಬ್ದುಲ್ ಖಾದರ್ ಸಖಾಫಿ ದುಆ ನೆರೆವೇರಿಸಿದರು.

ಎಸ್ಸೆಸ್ಸೆಫ್ ಮಂಗಳಪದವು ಸೆಕ್ಟರ್ ಉಪಾಧ್ಯಕ್ಷ, ದ.ಕ ಈಸ್ಟ್ ಜಿಲ್ಲಾ ಸಮಿತಿಯ ಸದಸ್ಯ ಉಮ್ಮರ್ ಅಮ್ಜದಿ ಕುಕ್ಕಿಲರವರು ಸಂದೇಶ ಭಾಷಣ ಮಾಡಿ ದೇಶದ ಹಿತಕ್ಕಾಗಿ ಪ್ರತಿಜ್ಞಾ ವಿಧಿ ಭೋಧಿಸಿದರು.

ಈ ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಇಬ್ರಾಹಿಂ ಕೋಡಪದವು, ಕೋಶಾಧಿಕಾರಿ ಶೌಕತ್ ಅಲಿ ಖಾನ್ ಮುಂದಾಳು ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ, ಗ್ರಾಮ ಪಂಚಾಯಿತಿ ಸದಸ್ಯರಾದ ರಘು ಪೂಜಾರಿ, ಅಬ್ದುರ್ರಹ್ಮಾನ್, ಎಸ್.ವೈ.ಎಸ್ ನಾಯಕ ಅಬ್ದುಲ್ ರಝಾಕ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಅಝೀಝ್ ಮದನಿ, ಅದ್ದ, ಹಾರಿಸ್ ಒಕ್ಕೆತ್ತೂರ್, ಅಬ್ದುಲ್ ರಝಾಕ್ ಮುಸ್ಲಿಯಾರ್, ಹಾಗೂ ಎಸ್ಸೆಸ್ಸಫ್ ಕೋಡಪದವು ಕುಕ್ಕಿಲ, ತಾಳಿತ್ತನೂಜಿ, ಬಾರೆಬೆಟ್ಟು, ಕೆಲಿಂಜ-ಪೆಲ್ತಡ್ಕ, ನೆಲ್ಲಿಗುಡ್ಡೆ, ಕೊಡಂಗೆ, ಒಕ್ಕೆತ್ತೂರು,ಮಂಗಳಪದವು ಶಾಖೆಯ ಕಾರ್ಯಕರ್ತರು ಮತ್ತು ಊರವರು ಉಪಸ್ಥಿತರಿದ್ದರು. ಮಸ್ಹೂದ್ ಹಿಮಮಿ ಸ್ವಾಗತಿಸಿ, ವಂದಿಸಿದರು. ಮಂಗಳಪದವು ಶಾಖೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.