HomePage_Banner
HomePage_Banner
HomePage_Banner
HomePage_Banner

ಪುತ್ತೂರು ಶಾಸಕರ, ಸಂಸದರ, ಸಚಿವರ ಪ್ರಯತ್ನದ ಫಲ | ಕಾರ್ತಿಕ್ ಮೇರ್ಲ ಕುಟುಂಬಕ್ಕೆ ರೂ. 5ಲಕ್ಷ ಮುಖ್ಯಮಂತ್ರಿ ಪರಿಹಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂಜಾವೇ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. ೫ಲಕ್ಷವನ್ನು ಶಾಸಕ ಸಂಜೀವ ಮಠಂದೂರು ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ ಅವರಿಗೆ ಹಸ್ತಾಂತರಿಸುವ ಮೂಲಕ ಪರಿಹಾರ ಒದಗಿಸುವ ಭರವಸೆ ಈಡೇರಿಸಿದ್ದಾರೆ.

೨೦೨೦ನೇ ಸೆ.೩ರಂದು ಕಾರ್ತಿಕ್ ಮೇರ್ಲ ಅವರ ಸ್ಮರಣಾಥ ಸಂಪ್ಯದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರು ಕಾರ್ತಿಕ್ ಮೇರ್ಲ ಅವರ ಮನೆಗೆ ತೆರಳಿ ಸಚಿವರು ಮತ್ತು ಸಂಸದರ ಶಿಫಾರಸ್ಸಿನ ಮೂಲಕ ಮುಖ್ಯಮಂತ್ರಿ ನಿಧಿಯಿಂದ ಕಾರ್ತಿಕ್ ಮೇರ್ಲ ಕುಟಂಬಕ್ಕೆ ಆರ್ಥಿಕ ಪರಿಹಾರ ನೀಡುವ ಕುರಿತು ಭರವಸೆ ವ್ಯಕ್ತಪಡಿಸಿದ್ದರು. ಇದೀಗ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಶಿಫಾರಸ್ಸಿನಂತೆ ಮುಖ್ಯಮಂತ್ರಿಯವರ ಪರಿಹಾರ ನಿಧಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜ.೨೬ರಂದು ಮುಖ್ಯಮಂತ್ರಿ ಪರಿಹಾರ ನಿಧಿಯ ರೂ. ೫ಲಕ್ಷದ ಚೆಕ್ ಅನ್ನು ಕಾರ್ತಿಕ್ ಮೇರ್ಲ ಅವರ ತಂದೆ ರಮೇಶ್ ಸುವರ್ಣ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರತ್ನಾವತಿ ಸುವರ್ಣ, ಪಂಚಾಯತ್ ಸದಸ್ಯರಾದ ಪೂರ್ಣಿಮಾ ರೈ, ಚೇತನ್ ಗೌಡ, ಪವಿತ್ರ ರೈ, ಬಿಜೆಪಿ ಬೂತ್ ಅಧ್ಯಕ್ಷ ನಾಗೇಶ್, ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.