ಪುತ್ತೂರು: ಮುಂಡೂರು ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ಸರ್ವ ಸದಸ್ಯರು ಮತ್ತು ಮುಂಡೂರು ಗ್ರಾಮ ಪಂಚಾಯತ್ ಸದಸ್ಯರು ಸೇರಿಕೊಂಡು ಮುಂಡೂರು ಗ್ರಾಮ ದ ಪುತ್ತಿಲ ಎಂಬಲ್ಲಿ ಅನಾರೋಗ್ಯ ದಲ್ಲಿರುವ ಶೀನಪ್ಪ ನಾಯ್ಕ್ ಎಂಬವರಿಗೆ ರೂ.೨೦,೫೦೦ ಅನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಗೆಳೆಯರ ಬಳಗದ ಈ ಕಾರ್ಯವೈಖರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದಷ್ಟು ಸಮಯದ ಹಿಂದೆ ಈ ಸಂಸ್ಥೆ ಯಿಂದ ಅನಾರೋಗ್ಯ ದಿಂದ ಇದ್ದ ಇಬ್ಬರು ವ್ಯಕ್ತಿಗಳಿಗೆ ಧನ ಸಹಾಯ ನೀಡಿದ್ದರು. ಈ ವರ್ಷದಲ್ಲಿ ರೂ ೫೦ಸಾವಿರ ಕ್ಕಿಂತಲೂ ಮಿಕ್ಕಿ ಧನ ಸಹಾಯ ಮಾಡುವ ಮುಖಂತರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಗೌರವ ಅಧ್ಯಕ್ಷ ಅರುಣ್ ಪುತ್ತಿಲ. ಅಧ್ಯಕ್ಷ ಹರೀಶ್ ನಾಯ್ಕ್. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ. ಅಶೋಕ್ ಪುತ್ತಿಲ. ಮುಂಡೂರು ಹಾಲು ಉತ್ಪಾದಕರ ಸಂಘದ ಸದಸ್ಯರಾದ ಅನಿಲ್ ಕುಮಾರ್. ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್. ಕಾರ್ಯದರ್ಶಿ ಜನಾರ್ದನ ಪೂಜಾರಿ. ಪ್ರಮುಖರಾದ ಪುರಂದರ ನಡುಬೈಲು. ಬಿ ಎಂ ಸ್ ನ ಸುಂದರ ನಾಯ್ಕ್. ನವೀನ್. ಸಂದೀಪ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.