ಪುತ್ತೂರು : ಪುತ್ತೂರಿನ ಬೊಳುವಾರು ಆಲ್ಮಾಸ್ ಟವರ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ರೋಯಲ್ ಸೌಹಾರ್ಧ ಸಹಕಾರಿಯ ಆಡಳಿತ ಮಂಡಳಿಯ ವತಿಯಿಂದ ನಡೆಯಲಿರುವ “ಸದಾಶಿವಾಭಿನಂದನ ಹಾಗೂ ರೋಯಲ್ ಗೋಲ್ಡ್ ಪ್ರಶಸ್ತಿ” ಪ್ರದಾನ ಸಮಾರಂಭದ ಪ್ರಯುಕ್ತ ಪೂರ್ವಭಾವಿ ಸಭೆ ಬ್ಯಾಂಕ್ನ ಕಾನೂನು ಸಲಹೆಗಾರ, ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಮಹೇಶ್ ಕಜೆರವರ ಕಚೇರಿಯಲ್ಲಿ ನಡೆಯಿತು. ಅಭಿನಂದನಾ ಸಮಾರಂಭ ಸಮಿತಿಯ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ರವರ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ, ಪ್ರಧಾನ ಕಾರ್ಯದರ್ಶಿ ಆನಂದ ರೈ ದೇವಿನಗರ, ನಿರ್ದೇಶಕ ಸಾಕ್ಷಾತ್ ಶೆಟ್ಟಿ, ಸಮಿತಿಯ ಸದಸ್ಯರಾದ ರಾಜೇಶ್ ಜೈನ್, ಕಾವು ದಿವ್ಯನಾಥ್ ಶೆಟ್ಟಿ ಉಪಸ್ಥಿತರಿದ್ದರು.