HomePage_Banner
HomePage_Banner
HomePage_Banner
HomePage_Banner

ಜ.30, 31: ಸರ್ವೆ ಪ್ರೀಮಿಯರ್ ಲೀಗ್ ಕ್ರಿಕೆಟ್ 8 ಫ್ರಾಂಚೈಸಿ ತಂಡಗಳ ಮಧ್ಯೆ ಮಿನಿ ಐಪಿಎಲ್ ಸಮರ ಸಾಧಕರಿಗೆ ಸನ್ಮಾನ-ಸೌಹಾರ್ದ ಸಂದೇಶ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 12 ವರ್ಷಗಳ ಹಿಂದೆ ಸರ್ವೆ ಗ್ರಾಮದಲ್ಲಿ ಪ್ರಾರಂಭಗೊಂಡಿರುವ `ಸರ್ವೆ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ-ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ-ಶಾಲೆಗೆ ಕೊಡುಗೆಗಳ ಹಸ್ತಾಂತರ, ಸೌಹಾರ್ದ ಸಂದೇಶ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜ.30 ಹಾಗೂ 31ರಂದು ಸರ್ವೆ ಕಲ್ಪಣೆಯಲ್ಲಿ ನಡೆಯಲಿದೆ.

ಈಗಾಗಲೇ ಎಸ್‌ಪಿಎಲ್ ಸೀಸನ್-1ರಿಂದ 5ರ ವರೆಗೆ ಯಶಸ್ವಿಯಾಗಿ ನಡೆದಿದೆ. ಸರ್ವೆ ಗ್ರಾಮಕ್ಕೊಳಪಟ್ಟ 8 ಫ್ರಾಂಚೈಸಿ ತಂಡಗಳು ಪಂದ್ಯಾಟದಲ್ಲಿ ಸ್ಪರ್ಧಿಸುತ್ತಿದ್ದು ಒಂದೊಂದು ತಂಡವನ್ನು ಮಾಲಕರು ಖರೀದಿಸಿದ್ದಾರೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು ಓರ್ವ ಆಟಗಾರನನ್ನು ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಿಕೊಳ್ಳಲು ಮಾಲಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತೀ ತಂಡದಲ್ಲಿ ಮೂವರು ಆಟಗಾರರು ಸರ್ವೆ ಗ್ರಾಮದ ಹೊರಗಿನವರಿಗೆ ಅವಕಾಶ ಕಲ್ಪಿಸಲಾಗಿದ್ದು ಪ್ರತೀ ತಂಡಗಳೂ ವಿವಿಧ ವಿನ್ಯಾಸದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯಲಿದೆ. ಪ್ರತೀ ತಂಡಕ್ಕೂ ಪ್ರತ್ಯೇಕ ಡಗೌಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಕಲ್ಪಣೆ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಿನಿ ಐಪಿಎಲ್ ಮಾದರಿಯಲ್ಲಿ ನಡೆಯಲಿರುವ ಪಂದ್ಯಾಟವು ಕಳೆದ ಐದು ಆವೃತಿಗಿಂತಲೂ ಈ ಬಾರಿ ಹೆಚ್ಚು ಅದ್ದೂರಿಯಾಗಿ ನಡೆಯಲಿದ್ದು ಕ್ರೀಡಾ ಪ್ರೇಮಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಸರ್ವೆ ಸೌಹಾರ್ದ ವೇದಿಕೆಯ ಆಶ್ರಯದಲ್ಲಿ ಪಂದ್ಯಾಕೂಟ ಆಯೋಜನೆಗೊಳ್ಳುತ್ತಿದ್ದು ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮುಖ್ಯ ಆಯೋಜಕರಾಗಿದ್ದಾರೆ.

ಪಂದ್ಯಾಕೂಟದಲ್ಲಿ ಸೊರಕೆ ಸ್ಟ್ರೈಕರ್‍ಸ್, ಟ್ರೋಫಿ ಫೈಟರ್‍ಸ್ ದರ್ಬೆ, ರೆಡ್ಕೋ ರೈಡರ್‍ಸ್ ಕೂಡುರಸ್ತೆ, ರೆಡ್‌ಗೈಸ್ ರೆಂಜಲಾಡಿ, ಬಡಕ್ಕೋಡಿ ಕ್ಯಾಪಿಟಲ್ಸ್, ಸನ್‌ರೇ ವಾರಿಯರ್‍ಸ್, ಬ್ಲಾಸ್ಟರ್‍ಸ್ ಕೂಡುರಸ್ತೆ, ಕಹಾನಿ ಫ್ರೆಂಡ್ಸ್ ರೆಂಜಲಾಡಿ ತಂಡಗಳು ಭಾಗವಹಿಸುತ್ತಿವೆ.

ಕ್ರಿಕೆಟ್ ಜೊತೆಗೆ ಗ್ರಾಮದ ಸಾಧಕರಿಗೆ ಸನ್ಮಾನ, ಸಾಧಕ ವಿದ್ಯಾರ್ಥಿಗಳ ಗುರುತಿಸುವಿಕೆ, ಶಾಲೆಗೆ ಕೊಡುಗೆ ಹಸ್ತಾಂತರ ಮತ್ತು ಸೌಹಾರ್ದ ಸಂದೇಶ ಕಾರ್ಯಕ್ರಮ ನಡೆಯಲಿದೆ. ಹಲವು ಗಣ್ಯರು ಪಂದ್ಯಾಕೂಟಕ್ಕೆ ಆಗಮಿಸಲಿದ್ದು ಕ್ರೀಡಾ ವೀಕ್ಷಕರಿಗೆ ಹಾಗೂ ಆಟಗಾರರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ಇಡೀ ಗ್ರಾಮ ಕ್ರೀಡಾ ಹಬ್ಬದ ಸವಿಯನ್ನು ಸವಿಯಲು ಸಜ್ಜಾಗಿದೆ.

ಸೌಹಾರ್ದ ಸಮಾಜದ ಉದ್ದೇಶ:
ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ ನಡೆಯಲಿರುವ ಎಸ್‌ಪಿಎಲ್ ಪಂದ್ಯಾಟದಲ್ಲಿ ಜಾತಿ, ಮತ, ಧರ್ಮಗಳ ಬೇಧ ಮರೆತು ಸರ್ವೆ ಗ್ರಾಮಸ್ಥರು ಭಾಗವಹಿಸಲಿದ್ದು ಗ್ರಾಮದಲ್ಲಿ ಸೌಹಾರ್ದ ವಾತಾವರಣ ಗಟ್ಟಿಗೊಳಿಸುವುದೇ ಪಂದ್ಯಾಟದ ಮುಖ್ಯ ಉದ್ದೇಶವಾಗಿದೆ ಎಂದು ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.