ಪುತ್ತೂರು : ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ.3,4 ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಜ.27ರಂದು ಬೆಳಿಗ್ಗೆ ನಡೆಯಿತು. ಶ್ರೀಮಹಾವಿಷ್ಣುಮೂರ್ತಿ ದೇವರಿಗೆ, ಸಾನಿದ್ಯ ನಾಗದೇವರಿಗೆ, ಮಹಾಗಣಪತಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆ ಮೂಹರ್ತ ನೆರೆವೇರಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಪತಿ ಬೈಪಾಡಿತ್ತಾಯ ಕೆಮ್ಮಾಯಿ, ಶ್ರೀಧರ ಬೈಪಾಡಿತ್ತಾಯ ಕೆಮ್ಮಾಯಿ, ಸದಾಶಿವ ಹೊಳ್ಳ ಕೆಮ್ಮಾಯಿ, ನರೇಂದ್ರ ಪಡಿವಾಳ್ ಮೂಡಾಯೂರು ಗುತ್ತು, ರಾಧಾಕೃಷ್ಣ ಹೆಗ್ಡೆ ಕೆಮ್ಮಾಯಿ, ರಾಮಣ್ಣ ಗೌಡ ಬಡಾವು, ಚಂದ್ರಶೇಖರ ಯಸ್ ಮೂಡಾಯೂರು, ವಿಷ್ಣುಮೂರ್ತಿ ಭಜನಾ ಮಂಡಳಿ ಕಾರ್ಯದರ್ಶಿ ಆಶೋಕ್ ಗೌಡ ಯಚ್, ತಿಮ್ಮಪ್ಪ ಗೌಡ ಶಾಂತಿನಿಲಯ ಕೆಮ್ಮಾಯಿ, ಪ್ರವಿಣ್ ನಾಯ್ಕ್ ಕೆಮ್ಮಾಯಿ, ಹೇಮಚಂದ್ರ ಕೆಮ್ಮಾಯಿ, ಪುರೋಷತ್ತಮ ಪೂಜಾರಿ ಅನಂತಿಮಾರು, ವಿಶ್ವನಾಥ ಗೌಡ ಏಕ, ಈಶ್ವರ ಗೌಡ ಕೆಮ್ಮಾಯಿ, ಆಶೋಕ ಗೌಡ ಕೆಮ್ಮಾಯಿ, ತಿಮ್ಮಪ್ಪ ಗೌಡ ಕಟ್ಟೆದ ಮಜಲು, ವನಜಾ ನಾಯ್ಕ್ ಕೆಮ್ಮಾಯಿ, ರಮೇಶ್ ಕೆಮ್ಮಾಯಿ, ಹಾಗೂ ಶ್ರೀ ಮಹಾವಿಷ್ಣು ಮೂರ್ತಿ ಭಜನಾಮಂಡಳಿ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಬೈಪಾಡಿತ್ತಾಯ ಕುಟುಂಬಸ್ಥರು ಭಕ್ತಾಧಿಗಳು ಉಪಸ್ಥಿತರಿದ್ದರು.