ಉಪ್ಪಿನಂಗಡಿ. ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿ-ಉಪ್ಪಿನಂಗಡಿ ಇದರ ವತಿಯಿಂದ 15ನೇ ವರ್ಷದ ಮನೆಯಂಗಳದಲ್ಲಿ ಭಜನಾ ಮಹೋತ್ಸವವು ಜನವರಿ 10ರಿಂದ ಜನವರಿ 24ರವರೆಗೆ ನಡೆಯಿತು.
ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರು, ರಂಗಾಜೆ, ಸಂಕೇಶ, ಬಾರ್ಲ, ಅರ್ತಿಲ,ರಾಮನಗರ, ಮರೀಕೆ, ಮರೀಕೆ ಕಾಲೋನಿ, ನೂಜಿ, ಪಾದಾಳ, ಲಕ್ಷ್ಮೀನಗರ, ಸೂರ್ಯಂಬೈಲು, ದಾಸರಮೂಲೆ, ಬೆತ್ತೋಡಿ, ಪರಾರಿ, ಕಂಗ್ವೆ, ಮುಳಿಯ, ವರೆಕ್ಕ, ನಿನ್ನಿಕಲ್ಲು, ಪಳ್ಳದಕೋಡಿ, ಪಾತಾಳ ಮುಂತಾದ ಕಡೆಗಳಲ್ಲಿ ಒಟ್ಟು ೧೨ ದಿನಗಳಲ್ಲಿ ೨೬೫ ಮನೆಗಳಲ್ಲಿ ಭಜನಾ ಸೇವೆ ನಡೆಯಿತು. ಪದ್ಮನಾಭ ಸಪಲ್ಯ ಮರೀಕೆ, ಕೇಶವ ಗೌಡ ರಂಗಾಜೆ, ದೇವಕಿ ರಂಗಾಜೆ, ಹೊನ್ನಪ್ಪ ಗೌಡ ಪಲ್ಲದಕೋಡಿ, ಚಂದ್ರಯ್ಯ ಆಚಾರ್ಯ ನೂಜಿ, ಶಾಂತರಾಮ್ ಭಟ್ ಸೂರ್ಯಂಬೈಲು, ಪದ್ಮಾವತಿ ಬೆತ್ತೋಡಿ , ಕೃಷ್ಣಪ್ಪ ಕುಲಾಲ್ ಅರ್ತಿಲ, ವಿಶ್ವನಾಥ್ ಶೆಟ್ಟಿ ಕಂಗ್ವೆ, ಜಯಪ್ರಕಾಶ್ ಆಚಾರ್ಯ ನೂಜಿ , ಜಯರಾಮ ಶೆಟ್ಟಿ ನಿನ್ನಿಕಲ್ಲು ಮತ್ತು ಕೃಷ್ಣಪ್ಪ ಗೌಡ ನೂಜಿ ಇವರುಗಳು ದಿನದ ಕೊನೆಯಲ್ಲಿ ತಮ್ಮ ಮನೆಯಲ್ಲಿ ಭಜನಾ ಮಂಗಳೋತ್ಸವ ನಡೆಸಿ, ಅನ್ನಸಂತರ್ಪಣೆಯನ್ನು ನಡೆಸಿದರು.
ಮನೆಯಂಗಳದ ಭಜನಾ ಸೇವೆಯ ೧೩ನೇ ದಿನ ,ಜನವರಿ ೨೪ರಂದು ಭಜನಾ ಮಂದಿರದಲ್ಲಿ ಬೆಳಿಗ್ಗೆ ೭-೦೦ಕ್ಕೆ ಗಂಟೆಗೆ ಗಣಹೋಮ ಮತ್ತು ಶ್ರೀ ರಕ್ತೇಶ್ವರಿಗೆ ತಂಬಿಲ ಸೇವೆ, ರಾತ್ರಿ ಶ್ರೀ ದುರ್ಗಾಪೂಜೆ ಮತ್ತು ೧೫ನೇ ವರ್ಷದ ಮನೆಯಂಗಳದಲ್ಲಿ ಭಜನಾ ಮಹೋತ್ಸವದ ಮಹಾ ಮಂಗಳೋತ್ಸವ ನಡೆಯಿತು.
ಮಂಗಳೋತ್ಸವದಂದು ಶ್ರೀ ಶಾರದಾ ವನಿತಾ ಭಜನಾ ಮಂಡಳಿ ರಾಮನಗರ-ಉಪ್ಪಿನಂಗಡಿ ಇವರು ಭಜನಾ ಸೇವೆ ನಡೆಸಿದರು. ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು, ಜಿ.ಪಂ. ಸದಸ್ಯರಾದ ಶಯನ ಜಯಾನಂದ, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತ ಕೃಷ್ಣ ಆಚಾರ್ಯ ಮತ್ತು ಮುಕುಂದ ಗೌಡ ಬಜತ್ತೂರು, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು ಮತ್ತು ಧನಂಜಯ ನಟ್ಟಿಬೈಲು, ಉಪ್ಪಿನಂಗಡಿ ಬಿಜೆಪಿ ಶಕ್ತಿಕೇಂದ್ರದ ಸಂಚಾಲಕರಾದ ಆನಂದ ಕುಂಟಿನಿ ಪುತ್ತೂರು ತಾಲೂಕು ಬಿಜೆಪಿ ಯುವಮೊರ್ಚದ ಕಾರ್ಯದರ್ಶಿ ಆದೇಶ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ್ ಶೆಣೈ ಉಪಸ್ಥಿತಿಯಿದ್ದರು.
ಮಂಗಳೋತ್ಸವದಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ೨ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಉಷಾಚಂದ್ರ ಮುಳಿಯ, ಶ್ರೀಮತಿ ಉಷಾ ನಾಯ್ಕ್ ನಿನ್ನಿಕಲ್ಲು ಮತ್ತು ಶ್ರೀ ಲೋಕೇಶ್ ಬೆತ್ತೋಡಿ ಇವರು ಅನ್ನಸಂತರ್ಪಣಾ ಸೇವೆಯನ್ನು ನಡೆಸಿದರು. ಭಜನಾ ಮಂಡಳಿ ಮತ್ತು ಶ್ರೀ ದುರ್ಗಾ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಮನೆಯಂಗಳದ ಭಜನಾ ಮಹೋತ್ಸವದ ಯಶಸ್ವಿಗೆ ಸಹಕರಿಸಿದರು.