ಪುತ್ತೂರು : ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಬಳಿಕ ಜ. 26ರಂದು ದೇವಸ್ಥಾನದ ವಠಾರದಲ್ಲಿ ಕೊಳ್ತಿಗೆ ಓಂ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪೆರ್ಲಂಪಾಡಿ ಹಿಂದೂ ಜಾಗರಣಾ ವೇದಿಕೆ ಹಾಗೂ ದುಗ್ಗಳದ ಮದುರ ಯುವ ಫ್ರೆಂಡ್ಸ್ ಸಂಘದ ಸದಸ್ಯರಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಅದೇ ರೀತಿ ಜ. 25ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಬಿ’ ಒಕ್ಕೂಟದ ಸದಸ್ಯರಿಂದ ದೇವಳದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನೇಮಿರಾಜ ಪಾಂಬಾರು ಜೊತೆಗಿದ್ದರು.