HomePage_Banner
HomePage_Banner
HomePage_Banner
HomePage_Banner

ಕುಂಬ್ರ: ರಿಕ್ಷಾ ತಂಗುದಾಣಕ್ಕೆ ಶಾಸಕರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳೆಯುತ್ತಿರುವ ಕುಂಬ್ರ ಪೇಟೆಯಲ್ಲಿ ರಿಕ್ಷಾ ತಂಗುದಾಣದ ಕೊರತೆಯಿದ್ದು ಬೇಸಿಗೆಯಲ್ಲಿ ರಿಕ್ಷಾ ಚಾಲಕರು ಬೇಸಿಗೆಯಲ್ಲಿ ಬಿಸಿಲಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಇದ್ದು ಇದಕ್ಕಾಗಿ ಕುಂಬ್ರದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣ ಮಾಡುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಕುಂಬ್ರದ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಪುತ್ತೂರು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ ನೇತೃತ್ವದಲ್ಲಿ ಶಾಸಕರ ಕಚೇರಿಗೆ ತೆರಳಿದ ರಿಕ್ಷಾ ಚಾಲಕ ಮಾಲಕ ಸಂಘದ ನಿಯೋಗ ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಕುಂಬ್ರ ಸ್ನೇಹ ಸಾಗರ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವಾಸುಪೂಜಾರಿ ಅಜ್ಜಿಕಲ್ಲು, ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಗಟ್ಟಮನೆ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಮಾಧವ ರೈ ಕುಂಬ್ರ, ಸಂಘದ ಪದಾಧಿಕಾರಿಗಳಾದ ಹಸೈನಾರ್, ಗಿರೀಶ್‌ಕೋರಂಗ, ಶ್ರೀನಿವಾಸ ಮುಡಾಲ ಮತ್ತಿತರರು ಉಪಸ್ಥಿತರಿದ್ದರು.

ಕುಂಬ್ರದಲ್ಲಿ ರಿಕ್ಷಾ ಚಾಲಕರು ಬೇಸಿಗೆಯಲ್ಲಿ ಬಿಸಿಲಲ್ಲೇ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ. ಚಾಲಕರಿಗೆ ನೆರಳು ಕಲ್ಪಿಸುವ ಉದ್ದೇಶದಿಂದ ತಂಗುದಾಣ ನಿರ್ಮಾಣ ಮಾಡುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ತಂಗುದಾಣ ನಿರ್ಮಾಣವಾದರೆ ಕುಂಬ್ರದ ಚಾಲಕರ ಬಹುಕಾಲದ ಬೇಡಿಕೆಯೊಂದು ಈಡೇರುತ್ತದೆ. ಅಭಿವೃದ್ದಿಯಲ್ಲಿ ಇಚ್ಚಾಶಕ್ತಿ ಹೊಂದಿರುವ ಶಾಸಕ ಮಠಂದೂರು ಅವರು ಒಳಮೊಗ್ರು ಗ್ರಾಮಕ್ಕೆ ಈಗಾಗಲೇ ೪ ಕೋಟಿಗೂ ಮಿಕ್ಕಿ ಅನುದಾನ ನೀಡಿದ್ದಾರೆ. ತಂಗುದಾಣವೂ ನಿರ್ಮಾಣವಾಗಲಿದೆ:ನಿತೀಶ್‌ಕುಮಾರ್ ಶಾಂತಿವನ, ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.