HomePage_Banner
HomePage_Banner
HomePage_Banner
HomePage_Banner

ಬಿಜೆಪಿ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯರಾಗಿ ಅಕ್ಷಯ್ ರೈ ದಂಬೆಕಾನ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೨೦೨೦-೨೩ ರ ಸಾಲಿನ ಭಾರತೀಯ ಜನತಾ ಪಾರ್ಟಿಯ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯರಾಗಿ ಅಕ್ಷಯ್ ರೈ ದಂಬೆಕ್ಕಾನ ಪುನರಾಯ್ಕೆಯಾಗಿದ್ದಾರೆ. ರಾಜ್ಯ ಯುವ ಮೋರ್ಛಾ ಅಧ್ಯಕ್ಷ ಡಾ|| ಕೆ.ಸಿ ಸಂದೀಪ್ ಕುಮಾರ್ ಈ ಆಯ್ಕೆ ಮಾಡಿದ್ದಾರೆ.

ಅಕ್ಷಯ್ ರೈ ದಂಬೆಕ್ಕಾನರವರು ೨೦೦೨ ರಿಂದ ಎಬಿವಿಪಿ ಪುತ್ತೂರು ಘಟಕದಲ್ಲಿ ಕೆಲಸ ಆರಂಭಿಸಿ ಬಳಿಕ ಬೆಂಗಳೂರಿನಲ್ಲಿ ನಗರ ಮಂಡಲದಲ್ಲಿ ಯುವ ಮೋರ್ಛಾದಲ್ಲಿ ಕೆಲಸ ಮಾಡಿದ್ದರು. ಬಳಿಕ ೨೦೧೨ ರ ನಂತರ ೨ ಬಾರಿ ಬೆಂಗಳೂರು ಯುವ ಮೋರ್ಛಾದಲ್ಲಿ ವಿವಿಧ ಜವಬ್ದಾರಿಯನ್ನು ಪಡೆದು ಪಕ್ಷನಿಷ್ಠೆ ತೋರಿಸಿದ್ದರು. ೨೦೧೬ ರಲ್ಲಿ ರಾಜ್ಯ ಯುವ ಮೋರ್ಚಾದಲ್ಲಿ ಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ೫ ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜವಬ್ದಾರಿಯನ್ನು ಪಡೆದು ಕೆಲಸ ನಿರ್ವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಜವಬ್ದಾರಿ ಪಡೆದುಕೊಂಡು ಕೆಲಸ ಮಾಡಿದ ಅನುಭವ ಇವರಿಗಿದೆ. ಇದೀಗ ೨ ನೇ ಬಾರಿಗೆ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದಾರೆ. ಇವರು ಪಕ್ಷದ ಹೆಸರಿನಲ್ಲಿ ಕಿರುಚಿತ್ರಗಳನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.

ಅಕ್ಷಯ್ ರೈ ದಂಬೆಕ್ಕಾನರವರು ನೂಜಿ ತರವಾಡು ಮನೆ ಸದಾಶಿವ ರೈ ದಂಬೆಕ್ಕಾನ ಮತ್ತು ಪ್ರಭಾ ಎಸ್.ರೈಯವರ ಪುತ್ರರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.