ಪುತ್ತೂರು: ಈಶ್ವರಮಂಗಲದ ಸಹಜ್ ರೆಸಿಡೆನ್ಸ್ ಆಂಡ್ ಎ.ಆರ್.ಕಾಂಪ್ಲೆಕ್ಸ್ನಲ್ಲಿ ಶ್ರೀ ಭಗವತಿ ಸ್ಟೀಲ್ ಜ.28ರಂದು ಉದ್ಘಾಟನೆಗೊಳ್ಳಲಿದೆ. ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶಿವರಾಮ ಪಿ, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸುಳ್ಯ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ಮಾಲಕ ಸುರೇಶ್ಚಂದ್ರ ಭಟ್ ಕಮಿಲರವರುಗಳು ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಗೋದಾಮು ಉದ್ಘಾಟನೆಯನ್ನು ಈಶ್ವರಮಂಗಲ ಹಿರ ಕಾಂಪ್ಲೆಕ್ಸ್ ಮಾಲಕ ಟಿ.ಎ ಅಬ್ದುಲ್ ಖಾದರ್ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಸಹಜ್ ರೆಸಿಡೆನ್ಸಿನ ಮಾಲಕ ಜಯರಾಮ ರೈ ಬಳಜ್ಜ, ಎ.ಆರ್.ಕಾಂಪ್ಲೆಕ್ಸ್ನ ಮಾಲಕ ಇಸ್ಮಾಯಿಲ್, ಗ್ರಾಪಂ ಸದಸ್ಯ ಎ.ರಮೇಶ್ ರೈ ಸಾಂತ್ಯ, ಸಿವಿ ಇಂಜಿನಿಯರ್ ಸೂರಜ್ ಕೊಡಿಯಾಲಬೈಲ್ ಭಾಗವಹಿಸಲಿದ್ದಾರೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಗವತಿ ಸ್ಟೀಲ್ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.