HomePage_Banner
HomePage_Banner
HomePage_Banner
HomePage_Banner

ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವ ಯಶಸ್ವಿ ಸಂಪನ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ನವೀನ್ ರೈ ಪಂಜಳ

  • ನಿರೀಕ್ಷೆಗೂ ಮೀರಿ ಭಕ್ತಸಾಗರ ಆಗಮಿಸಿದ್ದು ಖುಶಿ ತಂದಿದೆ-ರವೀಂದ್ರ ಶೆಟ್ಟಿ ನುಳಿಯಾಲು

ಪುತ್ತೂರು: ಮೊಟ್ಟೆತ್ತಡ್ಕ ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಜ.೨೫ ರಂದು ನಡೆದಿದ್ದು ಯಶಸ್ವಿ ಸಂಪನ್ನ ಕಂಡಿದೆ.

ಮಧ್ಯಾಹ್ನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ದೈವಕ್ಕೆ ಎಣ್ಣೆ ಕೊಡುವುದು ಬಳಿಕ ಶ್ರೀ ಕೊರಗಜ್ಜ ದೈವದ ನೇಮೋತ್ಸವ, ಶಿಲಾ ಪ್ರತಿಷ್ಟೆ, ಮತ್ತು ನೇಮೋತ್ಸವ ಯಶಸ್ವಿಯಾಗಿ ನಡೆಯಿತು. ಜನವರಿ ೨೩ ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಜರಗಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದೆ. ಜನವರಿ ೨೪ ರಂದು ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ನಡೆಯಿತು.

ನಿರೀಕ್ಷೆಗೂ ಮೀರಿ ಭಕ್ತಸಾಗರ ಆಗಮಿಸಿದ್ದು ಖುಶಿ ತಂದಿದೆ-ರವೀಂದ್ರ ಶೆಟ್ಟಿ ನುಳಿಯಾಲು:
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಕ್ತರ ಬೇಡಿಕೆಯನ್ನು ಪೂರೈಸುವ ಕಾರಣಿಕರೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕೊರಗಜ್ಜರ ದೈವಸ್ಥಾನವು ಇಲ್ಲಿನ ಮಣ್ಣಾಪು ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಹೊಂದಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ಶ್ರೀ ಕೊರಗಜ್ಜ ದೈವಸ್ಥಾನದ ವಿಜ್ರಂಭಣೆಯ ನೇಮೋತ್ಸವಕ್ಕೆ ಸ್ಥಳೀಯರು ಅಲ್ಲದೆ ಹಲವರು ಬಹಳಷ್ಟು ದುಡಿದಿದ್ದಾರೆ. ಕಳೆದ ವರ್ಷವೇ ಇಲ್ಲಿ ನೇಮೋತ್ಸವ ಯಶಸ್ವಿಯಾಗಿ ಜರಗಬೇಕಿತ್ತು. ಆದರೆ ಕೋವಿಡ್ ಮಹಾಮಾರಿಯಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಈ ಕ್ಷೇತ್ರಕ್ಕೆ ಹೊರೆ ಕಾಣಿಕೆಯನ್ನು ನೀಡುವ ಕುರಿತು ಶಾಸಕ ಸಂಜೀವ ಮಠಂದೂರುರವರಲ್ಲಿ ನಾನು ಮನವಿ ಮಾಡಿದಾಗ ಕೂಡಲೇ ಶಾಸಕರು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಗೆ ಈ ಕುರಿತು ತಿಳಿಸಿದ್ದರು. ಕೂಡಲೇ ಅಲ್ಲಿನ ಆಡಳಿತ ಸಮಿತಿ ಕ್ಷೇತ್ರಕ್ಕೆ ಹೊರೆ ಕಾಣಿಕೆಯನ್ನು ಸಲ್ಲಿಸಿದ್ದು, ದೇವಸ್ಥಾನದ ಆಡಳಿತ ಸಮಿತಿಗೆ ಹಾಗೂ ಶಾಸಕರಿಗೆ ಹೃದಯಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ ಕೆಮ್ಮಿಂಜೆ ದೇವಸ್ಥಾನವಲ್ಲದೆ ಹಲವಾರು ಮಂದಿ ಭಕ್ತರು ಹೊರೆಕಾಣಿಕೆಯನ್ನು ಸಲ್ಲಿಸಿದ್ದು ಅವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ವಿವಿಧ ಭಾಗಗಳಿಂದ ನಮ್ಮ ನಿರೀಕ್ಷೆಗೂ ಮೀರಿ ಭಕ್ತಸಾಗರ ತಮ್ಮ ಕುಟುಂಬದೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು ನಮ್ಮೆಲ್ಲರಿಗೆ ಬಹಳ ಖುಶಿ ತಂದಿದೆ ಎಂದು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು `ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ರವೀಂದ್ರ ಶೆಟ್ಟಿರವರ ಮುಂದಾಳತ್ವದಲ್ಲಿ ಯಶಸ್ವಿ ಕಾರ್ಯಕ್ರಮ-ವಿಶ್ವನಾಥ ಮಣ್ಣಾಪು:
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಲು ಹಾಗೂ ಯಶಸ್ವಿಯಾಗಿ ಸಂಪನ್ನಗೊಳ್ಳಲು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರೇ ಪ್ರಮುಖ ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಅವರು ನಮಗೆ ನೀಡಿರುವ ಸೂಕ್ತ ಮಾರ್ಗದರ್ಶನ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಹೃದಯಾಂತರಾಳದ ಮಾತುಗಳು ನಮ್ಮನ್ನು ಬಹಳ ಪ್ರೇರೇಪಿಸಿತ್ತು. ರವೀಂದ್ರ ಶೆಟ್ಟಿಯವರ ಪ್ರೇರೇಪಣೆಯ ಮಾತುಗಳಿಂದ ಇಂದು ಈ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಮುಗಿದಿದೆ. ಕಾರ್ಯಕ್ರಮಕ್ಕೆ ನೀಡಿದ ಸಹಕಾರಕ್ಕೆ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಕೆಮ್ಮಿಂಜೆ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆರವರು ಹೇಳಿದರು.

ಹರಕೆಯನ್ನು ಒಪ್ಪಿಸುವವರು ಅದೇ ದಿನ ಸಮಿತಿಯವರಲ್ಲಿ ತಿಳಿಸತಕ್ಕದ್ದು. ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಕ್ಕಿ, ಹೂ, ಹಿಂಗಾರ, ಬೀಡ, ಚಕ್ಕುಲಿ, ಶೇಂದಿ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ಭಕ್ತಾಧಿಗಳಿಂದ ಅನ್ನದಾನಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳು, ತರಕಾರಿಗಳು, ಬಾಳೆಎಲೆ ಮೊದಲಾದುವುಗಳನ್ನು ಕೃತಜ್ಞತಾಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸಲಾಗುತ್ತದೆ. ಹರಕೆಯನ್ನು ಸಲ್ಲಿಸಲು ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಬೇಡಿಕೆಗಳನ್ನು ಶ್ರೀ ಕ್ಷೇತ್ರದಲ್ಲಿ ಕೇಳಲಾಗುವುದಿಲ್ಲ. ಭಕ್ತರ ಇಚ್ಚೆಯನುಸಾರ ಕಾಣಿಕೆಯನ್ನು ನೀಡಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಶ್ರೀ ಕ್ಷೇತ್ರವು ಪ್ರಕಟಣೆಯಲ್ಲಿ ತಿಳಿಸಿದೆ.

೫ ಸಾವಿರಕ್ಕೂ ಮಿಕ್ಕಿ ಭಕ್ತಸಾಗರ….
೩೮೦ ವರ್ಷಗಳ ಇತಿಹಾಸವಿರುವ ಇಲ್ಲಿನ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಾ ಹಾಗೂ ನೇಮೋತ್ಸವ ಕಾರ್ಯಕ್ರಮವು ವಿಜ್ರಂಭಣೆಯಿಂದ ಸಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರವನ್ನು ಲೈಟಿಂಗ್ಸ್ ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕೃತಗೊಳಿಸಲಾಗಿತ್ತು. ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಸುಮಾರು ಮೂರು ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಆಡಳಿತ ಸಮಿತಿ ಹೊಂದಲಾಗಿತ್ತು. ಆದರೆ ಶ್ರೀ ಕೊರಗಜ್ಜನ ಮಹಿಮೆಯೇ ಅಂತಹುದು ಹಾಗೂ ಕೊರಗಜ್ಜನನ್ನು ನಂಬಿದರೆ ನಮಗೆ ಶ್ರೇಯ ಲಭಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಶ್ರೀ ಕ್ಷೇತ್ರಕ್ಕೆ ವಿವಿಧ ಭಾಗಗಳಿಂದ ಸುಮಾರು ೫ ಸಾವಿರಕ್ಕೂ ಮಿಕ್ಕಿ ಭಕ್ತಸಾಗರದ ಪ್ರವಾಹವೇ ಹರಿದು ಬಂದಿರುವುದು ವಿಶೇಷವೇ ಸರಿ. ಆಗಮಿಸಿದ ಭಕ್ತಸಾಗರ ಶ್ರೀ ಕ್ಷೇತ್ರದಲ್ಲಿ ಪೂಜೆ ನಡೆಸಿ, ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ತೃಪ್ತಿಪಟ್ಟುಕೊಂಡಿದ್ದಾರೆ.

ಶಾಸಕರ ಭೇಟಿ..
ಕಾರ್ಯಕ್ರಮದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರುರವರು ಆಗಮಿಸಿ ಉದ್ಘಾಟನೆಗೊಳಿಸಬೇಕಿತ್ತು. ಆದರೆ ಸುಳ್ಯದಲ್ಲಿ ಸಚಿವ ಅಂಗಾರರವರ ಅಭಿನಂದನಾ ಸಮಾರಂಭವಿದ್ದುದರಿಂದ ಶಾಸಕ ಸಂಜೀವ ಮಠಂದೂರುರವರಿಗೆ ಭಾಗವಹಿಸಲು ಅಸಾಧ್ಯವಾಗಿತ್ತು. ಆದರೂ ತಡರಾತ್ರಿ ಸುಳ್ಯದಿಂದ ಆಗಮಿಸಿದ ಶಾಸಕ ಮಠಂದೂರುರವರು ಮಣ್ಣಾಪು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಪಡೆದುಕೊಂಡಿದ್ದಾರೆ. ಅಲ್ಲದೆ ಶ್ರೀ ಕ್ಷೇತ್ರದಲ್ಲಿ ಮಾಡಲಾದ ಅದ್ಭುತ ವ್ಯವಸ್ಥೆಯನ್ನು ಕಂಡು ಶಾಸಕ ಸಂಜೀವ ಮಠಂದೂರುರವರು ಹೊಗಳಿದ್ದಾರೆ.

ಕಾರ್ಯಕ್ರಮವನ್ನು ಸುದ್ದಿ ಯೂಟ್ಯೂಬ್ ಚ್ಯಾನೆಲ್ ನೇರ ಪ್ರಸಾರವನ್ನು ಮಾಡಿದ್ದು ಸುಮಾರು ೧೭ ಸಾವಿರಕ್ಕೂ ಮಿಕ್ಕಿ ಭಕ್ತರು ಕಾರ್ಯಕ್ರಮವನ್ನು ವೀಕ್ಷಿಸಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.