ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ಪೌತಿ/ ವಾರಿಸು ಖಾತೆ ಆಂದೋಲನವು ಸರಕಾರದ ಆದೇಶದಂತೆ ರೈತಾಪಿ ವರ್ಗದ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕಡಬ ತಹಶೀಲ್ದಾರ್ ಅನಂತಶಂಕರ ಹೇಳಿದರು.
ಅವರು ಕಡಬ ತಾಲೂಕು ಕಂದಾಯ ಇಲಾಖೆಯ ವತಿಯಿಂದ ಬೆಳಂದೂರು ಗ್ರಾ.ಪಂನ ರಾಜೀವಗಾಂಧಿ ಸಭಾಂಗಣದಲ್ಲಿ ಜ ೨೭ರಂದು ನಡೆದ ಬೆಳಂದೂರು, ಸವಣೂರು, ಕಾಣಿಯೂರು, ಪುಣ್ಚಪ್ಪಾಡಿ, ದೋಳ್ಪಾಡಿ, ಪಾಲ್ತಾಡಿ, ಚಾರ್ವಾಕ, ಕುದ್ಮಾರು, ಕಾಮಣ ಗ್ರಾಮಗಳ ಪೌತಿ/ವಾರೀಸು ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ತಾ.ಪಂ, ಸದಸ್ಯೆ ಲಲಿತಾ ಈಶ್ವರ, ಸವಣೂರು ಗ್ರಾ.ಪಂ, ಸದಸ್ಯರಾದ ಗಿರಿಶಂಕರ ಸುಲಾಯ, ಬೆಳಂದೂರು ಗ್ರಾ.ಪಂ, ಸದಸ್ಯರಾದ ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಉಪತಹಶೀಲ್ದಾರ್ ನವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳಂದೂರು ಗ್ರಾ.ಪಂ, ಕಾರ್ಯದರ್ಶಿ ನಾರಾಯಣ್, ಕಡಬ ಕಂದಾಯ ಇಲಾಖೆಯ ರಂಜಿತ್, ಗ್ರಾಮಕರಣಿಕರಾದ ಪುಷ್ಪರಾಜ್, ಸಂತೋಷ್, ಸುನೀತ, ಸತೀಶ್, ರವಿಚಂದ್ರ, ಗ್ರಾಮಸಹಾಯಕರಾದ ಪದ್ಮಯ್ಯ ಗೌಡ, ಪ್ರೀತಮ್, ಭಾಸ್ಕರ್, ವಾಸುದೇವ ನಾಯ್ಕ್, ಯೊಗೀಶ್, ಬಾಬು, ದಯಾನಂದ, ಶೀನಪ್ಪ ಸಹಕರಿಸಿದರು. ಕಂದಾಯ ನಿರೀಕ್ಷಕ ಅವೀನ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.