ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಾಲ್ಮರ ಸಮಿತಿ ವತಿಯಿಂದ 72ನೇ ಗಣರಾಜ್ಯೋತ್ಸವದ ಅಂಗವಾಗಿ ಕೆರೆಮೂಲೆಯಲ್ಲಿ ಧ್ವಜಾರೋಹಣಾ ಕಾರ್ಯಕ್ರಮ ನಡೆಯಿತು.
ಸಾಲ್ಮಾರ: ಎಸ್ ಡಿ ಪಿ ಐ ಸಾಲ್ಮರ ವತಿಯಿಂದ 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಎಸ್.ಡಿ.ಪಿ.ಐ ಪುತ್ತೂರು ನಗರ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಜುನೈದ್ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಎಸ್.ಡಿ.ಪಿ.ಐ ಪುತ್ತೂರು ತಾಲೂಕು ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಸಾಲ್ಮರ ಮತ್ತು ಸಯ್ಯದ್ಮಲೆ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಸುಲೈಮಾನ್ ಹಾಜಿ ಸಾಲ್ಮರ ರವರು ಧ್ವಜಾರೋಹಣಗೈದರು.
ನಂತರ ದೆಹಲಿಯ ರೈತ ಪ್ರತಿಭಟನೆ ಯಲ್ಲಿ ಹುತಾತ್ಮರಾದ ರೈತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ವಿಧ್ಯಾರ್ಥಿಗಳಿಂದ ಐಕ್ಯಗಾನ ಹಾಡಿದರು. ಪ್ರಸ್ತಾವಿಕವಾಗಿ ಎಸ್.ಡಿ.ಟಿ.ಯು. ಪುತ್ತೂರು ತಾಲೂಕು ಅಧ್ಯಕ್ಷರಾದ ಹಮೀದ್ ಸಾಲ್ಮರ ಮತ್ತು ಉಸ್ಮಾನ್ ಕೆರೆಮೂಲೆರವರು ಸಂದೇಶ ಭಾಷಣವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಾಲಿ ಉಪಾಧ್ಯಕ್ಷರಾದ ಇಸ್ಮಾಯಿಲ್ ಸಾಲ್ಮರ, ನಾಡಿನ ಹಿರಿಯಾದ ಕರೀಂ ಜಿಡೆಕಲ್ಲು,ಸಯ್ಯದ್ಮಲೆ ಜುಮಾ ಮಸೀದಿಯ ಜೊತೆಕಾರ್ಯದರ್ಶಿಯಾದ ಯುಸುಫ್ ತಾರಿಗುಡ್ಡೆ, ಎಸ್.ಡಿ.ಫಿ.ಐ ನಗರ ಸಮೀತಿ ಉಪಾಧ್ಯಕ್ಷರಾದ ಲತೀಫ್ ಸಾಲ್ಮ್ರ, ಎಸ್.ಡಿ.ಫಿ.ಐ ಕೆರೆಮೂಲೆ ಸಮಿತಿ ಖಜಾಂಜಿಯಾದ ಕಮಾಲ್ ಸಾಲ್ಮರ, ನಾಡಿನ ನಾಗರಿಕರು, ಹಿರಿಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ಎಸ್.ಡಿ.ಪಿ.ಐ ತಾರಿಗುಡ್ಡೆ ಕಾರ್ಯದರ್ಶಿಯಾದ ಸಾದಿಕ್ ಸಯ್ಯದ್ಮಲೆ ಕರ್ಯಕ್ರಮ ನಿರೂಪಿಸಿ ವಂದಿಸಿದರು.