HomePage_Banner
HomePage_Banner
HomePage_Banner
HomePage_Banner

ಜ .28,29: ಕುಂಬ್ಲಾಡಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಜ ೨೮, ೨೯ರಂದು ನಡೆಯಲಿದೆ. ಜ ೨೮ರಂದು ಪೂರ್ವಾಹ್ನ ಪೂರ್ವಾಹ್ನ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, ನಾಲ್ಕಂಬ ಉಳ್ಳಾಲ್ತಿ ಕ್ಷೇತ್ರದಲ್ಲಿ ಪ್ರಾರ್ಥನೆ, ದೇವಳದಲ್ಲಿ ತೋರಣ ಮುಹೂರ್ತ, ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ಮಧ್ಯಾಹ್ನ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಸಾಯಂಕಾಲ ತಂತ್ರಿ ಪರಿವಾರದವರ ಆಗಮನ- ಸ್ವಾಗತ, ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವೈದಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು, ರಾಕ್ಷೆಘ್ನ ಹೋಮ, ವಾಸ್ತು ಬಲಿ, ರಾತ್ರಿ ಪೂಜೆ, ಕೂಡುಕಟ್ಟಿನ ಮಕ್ಕಳಿಂದ ಯಕ್ಷಗುರು ಕೊಡ್ಲಾ ಗಣಪತಿ ಭಟ್‌ರವರ ನಿರ್ದೇಶನದಲ್ಲಿ ಕುಶಲವ ಕಾಳಗ ಯಕ್ಷಗಾನ, ಧಾರ್ಮಿಕ ಸಭೆ, ಸುಳ್ಯದ ಪ್ರಸಿದ್ಧ ಆಹ್ವಾನಿತ ತಂಡಗಳಿಂದ ನೃತ್ಯ ಪ್ರದರ್ಶನ, ಅನ್ನಸಂತರ್ಪಣೆ ನಡೆಯಲಿದೆ.

ಜ ೨೯ರಂದು ಪೂರ್ವಾಹ್ನ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಪ್ರಸಾದ ವಿತರಣೆ, ದೇವರ ಕೆರೆಯಿಂದ ಪವಿತ್ರಜಲ ತರುವುದು, ಉಳ್ಳಾಲ್ತಿ ಸನ್ನಿಧಿಯಲ್ಲಿ ಕಲಶಪೂಜೆ, ವ್ಯಾಘ್ರ ಚಾಮುಂಡಿ ಸನ್ನಿಧಿಯಲ್ಲಿ ಕಲಶಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಆಶ್ಲೇಷ ಬಲಿ ಪೂಜೆ, ರಾತ್ರಿ ರಂಗಪೂಜೆ, ಶ್ರೀ ದೇವರ ಭೂತ ಬಲಿ, ನೃತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ನಾಲ್ಕಂಬ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಪ್ರಸಾದ ವಿತರಣೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ ಎಂದು ದೇವಸ್ಥಾನದ ವಿವಿದ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.