HomePage_Banner
HomePage_Banner
HomePage_Banner
HomePage_Banner

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಸಿ.ಬಿ.ಐ. ಮರು ತನಿಖೆಗೆ ಆಗ್ರಹಿಸಿ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ : ಧರ್ಮಸ್ಥಳದ ಮಲ್ಲಿಕ್ ಜೈನ್, ಧೀರಜ್ ಜೈನ್, ಉದಯ ಜೈನ್ ರವರನ್ನು ಆರೋಪಿಗಳನ್ನಾಗಿಸಲೂ ನಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶಾದ್ಯಂತ ತೀವ್ರ ಕುತೂಹಲ ಮತ್ತು ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ಹಚ್ಚಿದ್ದ ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸಿಬಿಐಯಿಂದ ಮರು ತನಿಖೆ ನಡೆಸಲು ಆದೇಶಿಸಬೇಕು ಎಂದು ಆಗ್ರಹಿಸಿ ಸೌಜನ್ಯರವರ ತಂದೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದವರಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ ಜೈನ್ ರವರನ್ನು ಆರೋಪಿಗಳನ್ನಾಗಿಸಿ ವಿಚಾರಣೆಗೊಳಪಡಿಸಬೇಕು ಎಂಬ ಚಂದಪ್ಪ ಗೌಡರವರ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿದೆ. ತಮ್ಮನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ ವಿಚಾರಣೆಗೊಳಪಡಿಸುವಂತೆ ಸಲ್ಲಿಕೆಯಾಗಿರುವ ಚಂದಪ್ಪ ಗೌಡರವರಿಂದ ಸಲ್ಲಿಕೆಯಾಗಿರುವ ರಿಟ್ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಧರ್ಮಸ್ಥಳದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ ಜೈನ್ ರವರು ಖ್ಯಾತ ವಕೀಲ ಪಿ.ಪಿ.ಹೆಗ್ಡೆಯವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿ.ಪಿ.ಹೆಗ್ಡೆಯವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು ಚಂದಪ್ಪ ಗೌಡರವರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.

ಘಟನೆಯ ವಿವರ: ಬೆಳ್ತಂಗಡಿಯನ್ನು ಬೆಚ್ಚಿ ಬೀಳಿಸಿದ್ದ ವಿದ್ಯಾರ್ಥಿನಿ ಸೌಜನ್ಯರವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ ಆದ್ದರಿಂದ ಸಿಬಿಐಯಿಂದ ಮರು ತನಿಖೆ ನಡೆಸಬೇಕು ಮತ್ತು ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದವರಾದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ ಜೈನ್ ರವರನ್ನು ಆರೋಪಿಗಳಾಗಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಸೌಜನ್ಯರವರ ತಂದೆ ಚಂದಪ್ಪ ಗೌಡರವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ ಜೈನ್ ರವರು ಖ್ಯಾತ ವಕೀಲ ಪಿ.ಪಿ.ಹೆಗ್ಡೆಯವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪಿ.ಪಿ.ಹೆಗ್ಡೆಯವರು ವಾದ ಮಂಡಿಸಿ ‘ಪ್ರಕರಣದ ನೈಜ ಆರೋಪಿಯಾಗಿರುವ ಸಂತೋಷ್ ರಾವ್ ಎಂಬಾತನನ್ನು ರಕ್ಷಿಸಲು ಮತ್ತು ತನಿಖೆಯನ್ನು ವಿಳಂಬಗೊಳಿಸಲು ಷಡ್ಯಂತ್ರ ರೂಪಿಸಿ ಹೈಕೋರ್ಟ್ ಗೆ ಈ ರಿಟ್ ಅರ್ಜಿ ಸಲ್ಲಿಸಲಾಗಿದೆ. ಆರೋಪಿ ಸಂತೋಷ್ ರಾವ್ ಜತೆ ದೂರುದಾರ ಚಂದಪ್ಪ ಗೌಡ ಮತ್ತು ನಾಗರಿಕ ಸೇವಾ ಟ್ರಸ್ಟ್ ನವರು ಶಾಮೀಲಾಗಿದ್ದು ತನಿಖೆಯ ಹಾದಿ ತಪ್ಪಿಸಲು ತಂತ್ರ ಹೂಡಿದ್ದಾರೆ. ಘಟನೆ ನಡೆದಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಬಂಧನಕ್ಕೊಳಗಾಗಿರುವ ಆರೋಪಿ ಸಂತೋಷ್ ರಾವ್ ಗೆ ಜಾಮೀನು ಸಿಗುವಂತಾಗಲೂ ಚಂದಪ್ಪ ಗೌಡರವರೇ ಕಾರಣರಾಗಿದ್ದಾರೆ. ಪ್ರಕರಣದ ಹಾದಿ ತಪ್ಪಿಸಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಕ್ಷೇತ್ರದ ಹೆಸರು ಕೆಡಿಸಲು ಪ್ರತಿಭಟನೆ ನಡೆಸಿದವರಿಗೆ ಅಂತರಾಷ್ಟ್ರೀಯ ಮಟ್ಟದಿಂದ ಹಣ ಬಂದಿದೆ. ಆರೋಪಿ ಸಂತೋಷ್ ರಾವ್ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದು ಸಿಬಿಐ ತನಿಖೆಯಿಂದ ಸಾಬೀತಾಗಿದೆ. ಆದ್ದರಿಂದ ಸಿಬಿಐಯ ಮರು ತನಿಖೆ ಅಗತ್ಯ ಇಲ್ಲ’ ಎಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಅಲ್ಲದೆ, ಸಿಬಿಐ ಅಧಿಕಾರಿಗಳು ಈಗಾಗಲೇ ನೂರಾರು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ, ಮೆಡಿಕಲ್ ಎವಿಡೆನ್ಸ್ ದಾಖಲು ಮಾಡಿದ್ದಾರೆ. ಆರೋಪಿ ಸಂತೋಷ್ ರಾವ್ ತಪ್ಪಿತಸ್ಥ ಎಂದು ಸಿಬಿಐ ವರದಿ ನೀಡಿದೆ. ಆದರೂ ಆರೋಪಿ ಸಂತೋಷ್ ರಾವ್ ನನ್ನು ಮಾನಸಿಕ ರೋಗಿ ಎಂದು ಬಿಂಬಿಸಿ ಆತನನ್ನು ರಕ್ಷಿಸಿ ನಿರಪರಾಧಿಗಳೂ, ಅಮಾಯಕರೂ ಆದ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ ಜೈನ್ ರವರನ್ನು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ಇದೆ, ಹಾಗಾಗಿ ರಿಟ್ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪಿ.ಪಿ.ಹೆಗ್ಡೆ ವಾದ ಮಂಡಿಸಿದ್ದರು. ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು ಚಂದಪ್ಪ ಗೌಡರವರ ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.