ಪುತ್ತೂರು: ಕುಂಬ್ರ ಬೆಳ್ಳಾರೆ ರಸ್ತೆಯ ಪಕ್ಕದಲ್ಲಿರುವ ಗೇಟಿನ ಬಳಿಕ ಯಕ್ತಿಯೋರ್ವರು ತನ್ನ ಕಾರು ನಿಲ್ಲಿಸಿ ಹೋಗಿದ್ದರು. ಕಾರು ನಿಲ್ಲಿಸಿ ಹೋದವರು ತುಂಬಾ ಹೊತ್ತಾದರೂ ಮರಳಿರಲಿಲ್ಲ. ಕಾರು ನಿಲ್ಲಿಸಿದ ಜಾಗವೋ ವ್ಯಕ್ತಿಯೋರ್ವರ ಖಾಸಗಿ ಜಾಗ. ಕಾರು ನಿಲ್ಲಿಸಿದ ಕಾರಣ ಸ್ಥಳದ ಮಾಲಕರಿಗೆ ಮನೆಗೆ ಹೋಗುವಂತಿರಲಿಲ್ಲ. ಆ ಕಡೆ ಈ ಕಡೆ ಯಾರ ಕಾರೆಂದು ವಿಚಾರಿಸಿದಾಗ ಕಾರು ಮಾಲಕನ ಪತ್ತೆಯಾಗಿರಲಿಲ್ಲ. ಕಾದು ಕಾದು ಸುಸ್ತಾದ ಜಾಗದ ಮಾಲಿಕ ತನ್ನ ರಸ್ತೆಗೆ ಅಡ್ಡವಾಗಿ ನಿಲ್ಲಿಸಿದ ಕಾರಿನ ಟಯರ್ನ ಗಾಳಿ ತೆಗೆದು ಪಂಕ್ಚರ್ ಮಾಡಿಯೇ ಬಿಟ್ರು. ಟಯರ್ ಪಂಕ್ಚರ್ ಮಾಡುತ್ತಿರುವಾಗಲೇ ಕಾರಿನ ಮಾಲಕ ಅಲ್ಲಿಗೆ ಬಂದ್ರು. ಕಾರು ನಿಲ್ಲಿಸಿದ್ದಕ್ಕೆ ಜಾಗದ ಮಾಲಿಕ ಕಾರು ಮಾಲಿಕನನ್ನು ತರಾಟೆಗೆ ಎತ್ತಿಕೊಂಡರು, ಟಯರ್ ಗಾಳಿ ತೆಗೆದು ಪಂಕ್ಚರ್ ಮಾಡಿದ್ದಕ್ಕೆ ಜಾಗದ ಮಾಲಿಕರನ್ನು ಕಾರು ಚಾಲಕ ತರಾಟೆಗೆ ಎತ್ತಿಕೊಂಡರು. ಇವರೊಳಗೆ ವಾಗ್ವಾದ ನಡೆಯಿತು. ಕೆಲವರಂತು ಪುಕ್ಕಟೆ ಮನರಂಜನೆಯನ್ನು ಪಡೆದರು. ಕೊನೆಗೆ ಕಾರು ಚಾಲಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರಿಗೆ ದೂರು ನೀಡಿದ ಬಳಿಕ ಇವರೊಳಗಿನ ವಾಗ್ವಾದ ತಣ್ಣಗಾಯಿತು. ಬಳಿಕ ಮಾತುಕತೆ ನಡೆದು ಪಂಕ್ಚರ್ ಮಾಡಿದ ಟಯರ್ಗೆ ಪುನ ಗಾಳಿ ತುಂಬಿಸಲಾಯಿತು. ಬಳಿಕ ವಿವಾದ ತಣ್ಣಗಾಯಿತು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.