- ವ್ಯವಹಾರದಲ್ಲಿ ಪ್ರಾಮಾಣಿಕತೆಯಿದ್ದಲ್ಲಿ ಯಶಸ್ಸುಕಾಣಲು ಸಾಧ್ಯ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಯಾವುದೇ ವ್ಯವಹಾರ ಮಾಡುವಾಗಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು. ಪ್ರಾಮಾಣಿಕತೆಯಿದ್ದಲ್ಲಿ ಯಾವುದೇ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಕುಂಬ್ರ ಕುಂಬ್ರ ವಿಜಯಾ ಬ್ಯಾಂಕ್ ಹಳೆಯ ಕಟ್ಟಡದಲ್ಲಿ ಫೆ. 1ರಂದು ಭಾರತ್ ಚಿಕನ್ ಸೆಂಟರ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳೆಯುತ್ತಿರುವ ಕುಂಬ್ರ ಪೇಟಗೆ ಅಗತ್ಯವಾಗಿರುವಂತೆ ಪೇಟೆಯ ಹೃದಯ ಭಾಗದಲ್ಲೇ ಚಿಕನ್ ಸೆಂಟರ್ ಆರಂಭಗೊಂಡಿದೆ. ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ಒಟ್ಟು ಮೂರು ಸಹಸಂಸ್ಥೆಯನ್ನು ಆರಂಭಿಸುವ ಮೂಲಕ ಗ್ರಾಹಕರ ಮನ ಗೆದ್ದಿದ್ದೀರಿ ಮುಂದಿನ ದಿನಗಳಲ್ಲಿಯೂ ಗ್ರಾಹಕರಿಗೆ ತೃಪ್ತಿದಾಯ ಸೇವೆ ನೀಡುವ ಸಂಸ್ಥೆ ಇನ್ನಷ್ಟು ಅಭಿವೃದ್ದಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ನೂತನ ಚಿಕನ್ ಸೆಂಟರನ್ನು ಕುಂಬ್ರ ಮರ್ಕಝ್ ಸಂಸ್ಥೆಯ ಕಾರ್ಯಾಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೋಳಿ ಅಂಗಡಿಗಳಲ್ಲಿ ಶುಚಿತ್ವ ಅತೀ ಮುಖ್ಯ. ಕುಂಬ್ರ ಪೇಟೆಯಲ್ಲೇ ಇರುವ ಕಾರಣ ಪರಿಸರದ ಬಗ್ಗೆ ಕಾಳಜಿಯೂ ಅತೀ ಅಗತ್ಯವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯು ಮನೆ ಮಾತಾಗಲಿ ಎಂದು ಹಾರೈಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಕೋಳಿ ಉದ್ಯಮದಿಂದ ಅನೇಕ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಜಿಲ್ಲೆಯಲ್ಲಿ ೫೦೦೦ ಕ್ಕೂ ಮಿಕ್ಕಿ ಕೋಳಿ ಫಾರಂಗಳು ಇದೆ. ಕೋಳಿಗಳಿಗೆ ನಿತ್ಯವೂ ಬೇಡಿಕೆ ಹೆಚ್ಚುತ್ತಲೇ ಇರುವುದು ಇದಕ್ಕೆ ಕಾರಣವಾಗಿದೆ. ಕುಂಬ್ರದಲ್ಲಿ ಶುಭಾರಂಭಗೊಂಡ ನಿಮ್ಮ ಸಂಸ್ಥೆಯು ಅತಿ ಶೀಘ್ರದಲ್ಲೇ ಉತ್ತರೋತ್ತರ ಅಭಿವೃದ್ದಿಯಾಗಲಿ ಎಂದು ಹೇಳಿದರು.
ಆರ್ಯಾಪು ಗ್ರಾಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ ನಾವು ಮಾಡುವ ಪ್ರತೀಯೊಂದು ವ್ಯವಹಾರದಲ್ಲೂ ಪ್ರೀತಿ ಇರಬೇಕು ಅದೇ ರೀತಿ ಗ್ರಾಹರಕ ಜೊತೆ ಸ್ನೇಹ ಸಂಬಂಧ ಇರಬೇಕು ಇದು ಸಂಶ್ಥೆಯ ಬೆಳವಣಿಗೆಗೆ ಉತ್ತಮ ಎಂದು ಹೇಳಿದರು.
ಮಗಿರೆ ಹಸನ್ ಮದನಿ ದುವಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮುಂಡೂರು ಗ್ರಾಪಂ ಸದಸ್ಯ ಕರುಣಾಕರ್ ಗೌಡ ಎಲಿಯ, ಅಬ್ದುಲ್ಲ ಹಾಜಿ ಡಿಂಬ್ರಿ, ಶ್ಯಾಂ ಸುಂದರ್ ರೈ ಕೊಪ್ಪಳ, ಕುಂಬ್ರ ಬದ್ರಿಯಾ ಜಮಾತ್ ಕಮಿಟಿ ಅಧ್ಯಕ್ಷ ಹಮೀದ್ ರಾಯಲ್, ಒಳಮೊಗ್ರು ಗ್ರಾಪಂ ಸದಸ್ಯ ಲತೀಫ್ , ಅರಿಯಡ್ಕ ಗ್ರಾಪಂ ಸದದಸ್ಯ ದಿವ್ಯನಾಥ ಶೆಟ್ಟಿ ಕಾವು, ಯೂಸುಫ್ ಮುಸ್ಲಿಯಾರ್ ಬೆದ್ರಗುರಿ, ಬಡಕಕ್ಕೋಡಿ ಮಸೀದಿಯ ಇಮಾಂ ಅಬ್ದುಲ್ ರಹಿಮಾನ್ ಫೈಝಿ, ಆದಂಕುಂಞಿ ಹಾಜಿ ಡಿಂಬ್ರಿ, ಅಶ್ರಫ್ ಸನ್ಸೈನ್ ಕುಂಬ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಯೂಸುಫ್ ಮುರ್ಷದಿ ಸ್ವಾಗತಿಸಿ ವಂದಿಸಿದರು.ಮಾಲಕರಾದ ಮಹಮ್ಮದ್ ಮುಸ್ಲಿಯಾರ್, ಬಶೀರ್ ಡಿಂಬ್ರಿ ಅತಿಥಿಗಳನ್ನು ಸ್ವಾಗತಿಸಿದರು.