ಪುತ್ತೂರು:ಲಯನ್ಸ್ ಕ್ಲಬ್ ಪುತ್ತೂರು ಕಾವು ಪ್ರವರ್ತಿಸುತ್ತಿರುವ ಎರಡನೇ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಫೆ.೪ ರಂದು ಆಸ್ತಿತ್ವಕ್ಕೆ ಬರಲಿದ್ದು, ಇದರ ಪದಪ್ರದಾನ ಸಮಾರಂಭ ಬಪ್ಪಳಿಗೆ-ಬೈಪಾಸ್ ರಸ್ತೆಯಲ್ಲಿನ ಆಶ್ಮಿ ಕಂಫರ್ಟ್ನಲ್ಲಿ ಸಂಜೆ ಜರಗಲಿದೆ.
ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ನೂತನ ಸ್ಥಾಪಕ ಅಧ್ಯಕ್ಷರಾಗಿ ಲ್ಯಾನ್ಸಿ ಮಸ್ಕರೇನ್ಹಸ್ ಸಾಮೆತ್ತಡ್ಕ, ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು ಹಾಗೂ ಕೋಶಾಧಿಕಾರಿಯಾಗಿ ಕೇಶವ ಪೂಜಾರಿ ಬೆದ್ರಾಳರವರು ನೇಮಕಗೊಂಡಿದ್ದಾರೆ. ನೂತನ ಪದಾಧಿಕಾರಿಗಳ ಪದಪ್ರದಾನವನ್ನು ಜಿಲ್ಲೆ ೩೧೭ಡಿ ಇದರ ಜಿಲ್ಲಾ ಗವರ್ನರ್(ರಾಜ್ಯಪಾಲ) ಡಾ.ಗೀತಪ್ರಕಾಶ್ರವರು ನೆರವೇರಿಸಿಕೊಡಲಿದ್ದಾರೆ. ಗೌರವ ಅತಿಥಿಗಳಾಗಿ ಜಿಲ್ಲೆ ೩೧೭ಡಿ ಇದರ ಪ್ರಥಮ ಉಪ ರಾಜ್ಯಪಾಲ ವಸಂತ್ ಶೆಟ್ಟಿ, ಎರಡನೇ ಉಪ ರಾಜ್ಯಪಾಲ ಸಂಜಿತ್ ಶೆಟ್ಟಿ, ರೀಜನ್ ಒಂದರ ರೀಜನ್ ಚೇರ್ಮ್ಯಾನ್ ಸಂತೋಷ್ ಶೆಟ್ಟಿ, ವಲಯ ಒಂದರ ವಲಯ ಚೇರ್ಮ್ಯಾನ್ ಹಾಗೂ ನೂತನ ಕ್ಲಬ್ನ ವಿಸ್ತರಣಾ ಆಧಿಕಾರಿ ಹೇಮನಾಥ ಶೆಟ್ಟಿ ಕಾವು, ಲಯನ್ಸ್ ಕ್ಲಬ್ ಪುತ್ತೂರು ಇದರ ಗೋಲ್ಡನ್ ಜ್ಯುಬಿಲಿ ವರ್ಷದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿರವರು ಭಾಗವಹಿಸಲಿದ್ದಾರೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಕಾರ್ಯದರ್ಶಿ ಪವನ್ ರಾಮ್, ಕೋಶಾಧಿಕಾರಿ ಅಬ್ದುಲ್ ಅಝೀಝ್ ಸಿ.ಎಚ್, ಲಯನ್ಸ್ ಕ್ಲಬ್ ಪುತ್ತೂರು ಇದರ ಮಾರ್ಗದರ್ಶನ ಅಧಿಕಾರಿ ಆನಂದ ರೈ ಪಿ, ಲಯನ್ಸ್ ಕ್ಲಬ್ ಪುತ್ತೂರು ಇದರ ವಿಸ್ತರಣಾ ಆಧಿಕಾರಿ ಗಣೇಶ್ ಶೆಟ್ಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದಪ್ರದಾನ…
ಜಿಲ್ಲೆ ೩೧೭ಡಿ, ರೀಜನ್ ೧, ವಲಯ ೧ರ ಲಯನ್ಸ್ ಕ್ಲಬ್ ಪುತ್ತೂರು ಕಾವು ಪ್ರವರ್ತಿಸುತ್ತಿರುವ ಎರಡನೇ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಆಗಿದ್ದು, ಈ ಮೊದಲು ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಕ್ಲಬ್ ಅನ್ನು ಪ್ರವರ್ತಿಸಿದ್ದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಸೇರಿ ಒಟ್ಟು ೨೩ ಸದಸ್ಯರು ಹೊಂದಿರುವ ಕ್ಲಬ್ ಆಗಿದೆ. ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪದಪ್ರದಾನ ಕಾರ್ಯಕ್ರಮದ ಬಳಿಕ ನೂತನ ಅಧ್ಯಕ್ಷರು ಅಂತಿಮಗೊಳಿಸಲಿದ್ದಾರೆ. ಜಿಲ್ಲೆ ೩೧೭ಡಿಯು ದಕ್ಷಿಣ ಕನ್ನಡ, ಕೂರ್ಗ್, ಚಿಕ್ಕಮಗಳೂರು ಹಾಗೂ ಹಾಸನ ಹೀಗೆ ನಾಲ್ಕು ಕಂದಾಯ ಜಿಲ್ಲೆಯನ್ನೊಳಗೊಂಡಿದೆ.