ಪುತ್ತೂರು: ಗಾಳ ಹಾಕಿ ಮೀನು ಹಿಡಿಯಲು ಹೋದ ತಂದೆ, ಮಗ, ಅಳಿಯನ ಪೈಕಿ ತಂದೆ ಹೊಳೆಯಲ್ಲಿ ಕಣ್ಮರೆಯಾದ ಘಟನೆ ನರಿಮೊಗ್ರು ಗ್ರಾಮ ಶಾಂತಿಗೋಡು ದಾರಂದಬಾಗಿಲು ಕುಮಾರಧಾರ ಹೊಳೆಯಲ್ಲಿ ಫೆ.02ರಂದು ನಡೆದಿದೆ. ಹೊಳೆಯಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಕಾಂತರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಮತ್ತು ಪೊಲೀಸರು ತೆರಳಿ ಕಾಂತರ ರವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.