HomePage_Banner
HomePage_Banner
HomePage_Banner
HomePage_Banner

ಕೆಮ್ಮಲೆ ಶ್ರೀ ಕ್ಷೇತ್ರದಲ್ಲಿ ಯಶಸ್ವಿ ಬ್ರಹ್ಮಕಲಶೋತ್ಸವ- ಅಭಿನಂದನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಎಲ್ಲರ ಸಹಕಾರದಿಂದ ಬ್ರಹ್ಮಕಲಶ ಸಂಭ್ರಮದಿಂದ ನಡೆದಿದೆ- ಜಯಾನಂದ ಹೇಮಳ



ಕಾಣಿಯೂರು: ಬ್ರಹ್ಮಕಲಶೋತ್ಸವವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಸಂಭ್ರಮದಿಂದ ನಡೆದಿದೆ. ಎಲ್ಲರ ತನುಮನದಿಂದ ಬ್ರಹ್ಮಕಲಶ ಯಶಸ್ವಿಯಾಗಿದ್ದು, ಕೈಜೋಡಿಸಿದ ಪ್ರತಿಯೊಬ್ಬರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಯಾನಂದರವರು ಹೇಳಿದರು. ಅವರು ಜ.೧೬ ರಿಂದ ಜ ೧೮ರವರೆಗೆ ತನಕ ನಡೆದ

ಎಣ್ಮೂರು ಗ್ರಾಮದ ಕೆಮ್ಮಲೆ ಹೇಮಳದಲ್ಲಿರುವ ಪುರಾತನ ನಾಗಬ್ರಹ್ಮ ದೇವಸ್ಥಾನ ಮತ್ತು ಬ್ರಹ್ಮರ ಮೂಲಸ್ಥಾನ ಉಳ್ಳಾಕುಲು, ಚಾಮುಂಡಿ ಹಾಗೂ ಪರಿವಾರ ದೈವಗಳ ಗುಡಿಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸಿದವರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ರಹ್ಮಕಲಶ ಸಂಭ್ರಮದಲ್ಲಿ ಸಹಕರಿಸುವ ಭಾಗ್ಯ ಎಲ್ಲರಿಗೂ ದೊರಕಿತ್ತು. ಇಡೀ ಊರಿಗೆ ಊರೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಸಂತೋಷದ ವಿಚಾರ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಂದ್ರಶೇಖರ ಮರಕ್ಕಡ ಪರಂಗಜೆ, ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ವಸಂತ ನಡುಬೈಲು, ಕೆಮ್ಮಲೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಕೆ, ಅಧ್ಯಕ್ಷ ಗಂಗಾಧರ ಗೌಡ ಇಡ್ಯಪೆ ಹೇಮಳ, ಪ್ರಧಾನ ಕಾರ್ಯದರ್ಶಿ ಜಯರಾಮ ಐಪಳ, ಉಪಾಧ್ಯಕ್ಷರಾದ ಧನಂಜಯ ಕೇನಾಜೆ, ಗೋಪಾಲಕೃಷ್ಣ ಕೆ, ಬ್ರಹ್ಮರು ಉಳ್ಳಾಕುಲು ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಕೋರ್ಜೆ, ಬ್ರಹ್ಮರು ಉಳ್ಳಾಕುಲು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಐಪಳ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮೋನಪ್ಪ ಗೌಡ ಹೆಚ್,ಜತೆ ಕಾರ್ಯದರ್ಶಿ ಪ್ರವೀಣ್ ಹೇಮಳ, ಮಿಥುನ್,ಕೆಮ್ಮಲೆ ಶ್ರೀನಾಗಬ್ರಹ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯಾನಂದ ಕೆ,ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಹರ್ಷಿತ್ ಹೇಮಳ,ಕೋಶಾಧಿಕಾರಿ ಗೋಪಾಲಕೃಷ್ಣ ಐಪಳ,ಉಪಾಧ್ಯಕ್ಷ ಗಣೇಶ ಎ ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ಹೇಮಳ ಸ್ವಾಗತಿಸಿ, ಪ್ರವೀಣ್ ಹೊಸಮನೆ ವಂದಿಸಿದರು. ಉಮೇಶ್ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನೆ: ಕೆಮ್ಮಲೆ ಶ್ರೀ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ದಾನಿಗಳಿಗೆ, ಸ್ಥಳ ದಾನಿಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಹಾಗೂ ಊರಿನ ಪ್ರತಿಯೊಂದ ಮನೆಯವರನ್ನು ಅಭಿನಂದಿಸಲಾಯಿತು.

ಮಾ 7 – ಶ್ರೀ ಕ್ಷೇತ್ರದಲ್ಲಿ ದೃಢಕಲಶ..
ಕೆಮ್ಮಲೆ ಶ್ರೀ ಕ್ಷೇತ್ರದಲ್ಲಿ ಮಾರ್ಚ್ ೭ರಂದು ದೃಢಕಲಶ ನಡೆಯಲಿದ್ದು, ಮಾರ್ಚ್ ೨೭ರಂದು ವಾರ್ಷಿಕ ಪೂಜೆ, ನಾಗತಂಬಿಲ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.