HomePage_Banner
HomePage_Banner
HomePage_Banner
HomePage_Banner

ಪೆರ್ನೆ: ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ | ಗಣಿ ಇಲಾಖೆ ಅಧಿಕಾರಿಗಳ ದಾಳಿ, ಮರಳು ಮುಟ್ಟುಗೋಲು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಅಕ್ರಮ ಶೆಡ್ ತೆರವು
  • ವರದಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳಲಾಗುವುದು-ಭೂವಿಜ್ಞಾನಿ


ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಗೆ ಫೆ.3ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಮುಟ್ಟುಗೋಲು ಮಾಡಿ, ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ ಶೆಡ್ ತೆರವುಗೊಳಿಸಿದೆ.

ಪೆರ್ನೆ ಗ್ರಾಮದ ಕಳೆಂಜ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹದೇಶ್ವರ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ನದಿಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಇರಿಸಿರುವುದನ್ನು ಪತ್ತೆ ಮಾಡಿ ಮುಟ್ಟುಗೋಲು ಹಾಕಿ ಬಳಿಕ ನದಿ ತಟದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ (ಗುಡಿಸಲು)ನ್ನು ತೆರವು ಮಾಡಿದ್ದಾರೆ.

ನೇತ್ರಾವತಿ ನದಿಯಲ್ಲಿ ಪೆರ್ನೆ ಎಂಬಲ್ಲಿ ನದಿಯಿಂದ ಮರಳು ಸಂಗ್ರಹಿಸಲಾಗಿ, ಹಗಲು ಮತ್ತು ರಾತ್ರಿಯಲ್ಲಿಯೂ ದಿನನಿತ್ಯ ೨೫ರಿಂದ ೩೦ ಲಾರಿ ಮರಳು ಯಾವುದೇ ದಾಖಲೆ ಪತ್ರಗಳಿಲ್ಲದೆ ನೇರವಾಗಿ ಬೆಂಗಳೂರು ಕಡೆಗೆ ಸಾಗಾಟ ಆಗುತ್ತಿರುವ ಬಗೆಗಿನ ದೂರಿನ ಬಗ್ಗೆ ವಾರದ ಹಿಂದೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು, ಮರಳು ತೆಗೆಯುತ್ತಿದ್ದವರು ಪರಾರಿ ಆಗಿದ್ದರು. ಈ ಮಧ್ಯೆ ಮರಳು ಸಾಗಿಸುವ ಸಲುವಾಗಿ ನದಿಯಲ್ಲಿ ರಸ್ತೆ ನಿರ್ಮಿಸಿರುವುದನ್ನು ಅಧಿಕಾರಿಗಳು ತೆರವು ಮಾಡಿದ್ದರು. ಇದೀಗ ಮತ್ತೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಬಗ್ಗೆ ಸ್ಥಳೀಯರು ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವರದಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳಲಾಗುವುದು-ಭೂವಿಜ್ಞಾನಿ
ಪೆರ್ನೆ ಗ್ರಾಮದ ಬಿಳಿಯೂರುನಲ್ಲಿ ಮರಳು ಸಂಗ್ರಹಕ್ಕೆ ಪರವಾನಿಗೆ ನೀಡಲಾಗಿದೆ. ಆದರೆ ಪೆರ್ನೆಯಲ್ಲಿ ಮರಳು ತೆಗೆಯಲು ಪರವಾನಿಗೆ ನೀಡಿರುವುದಿಲ್ಲ, ಆದರೆ ಅಲ್ಲಿ ಹನೀಫ್ ಎಂಬವರು ಮರಳು ತೆಗೆದು ದಾಸ್ತಾನು ಇರಿಸಿದ್ದು, ಅಲ್ಲಿ ಮಹಜರು ಮಾಡಿ ಮುಟ್ಟುಗೋಲು ಮಾಡಲಾಗಿ, ಶೆಡ್ ತೆರವು ಮಾಡಿದ್ದೇವೆ, ಈ ಬಗ್ಗೆ ಹಿರಿಯ ಅಧಿಕಾರಿಗೆ ವರದಿ ಸಲ್ಲಿಕೆ ಮಾಡಲಾಗಿ, ಕ್ರಮ ಕೈಗೊಳ್ಳಲಾಗುವುದು ಎಂದು ಭೂವಿಜ್ಞಾನಿ ಮಹದೇಶ್ವರ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.