HomePage_Banner
HomePage_Banner
HomePage_Banner
HomePage_Banner

ಪ್ರಾಮಾಣಿಕ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ – ಸುದರ್ಶನ್ ಮೂಡಬಿದ್ರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಭಾರತದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈ ಹಾಕುವ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದರೆ ಅಲ್ಲಿ ಅವರಿಗೆ ಜಾಗ ಇಲ್ಲ, ಒಂದಿಷ್ಟೂ ಗೌರವ ಸಿಗಲ್ಲ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು. ಕಡಮಜಲು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು `ಸುದ್ದಿ’ಯೊಂದಿಗೆ ಮಾತನಾಡಿದರು.

ಮುಸಲ್ಮಾನರ ಆಚಾರ-ವಿಚಾರ, ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿರುವ ಜಗತ್ತಿನ ಏಕೈಕ ದೇಶ ಅಂದರೆ ಅದು ಭಾರತ. ಇಲ್ಲಿ ನಿಂತುಕೊಂಡು ಪಾಕಿಸ್ತಾನದ ಪರ ಮಾತನಾಡ್ತಾರೆ. ಜೈ ಹಾಕ್ತಾರೆ. ಅವರು ಪಾಕಿಸ್ತಾನಕ್ಕೆ ಹೋದರೆ ಅಲ್ಲಿ ಅವರಿಗೆ ಪ್ರವೇಶ ಇರಲ್ಲ, ಅದನ್ನು ಮೊದಲು ತಿಳಿದುಕೊಳ್ಳಲಿ’ ಎಂದರು.

ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುತ್ತಿದೆ ಪರಿವರ್ತನೆಯ ಉದ್ದೇಶದಲ್ಲಿ ಇಂದು ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಅಧಿಕಾರದ ಲಾಲಸೆ ನಮ್ಮಲಿಲ್ಲ. ದೇಶದಲ್ಲಿ ಪರಿವರ್ತನೆಯಾಗುತ್ತಿರುವುದನ್ನು ಜಗತ್ತು ಕಾಣುತ್ತಿದೆ. ಇದನ್ನು ನೋಡಿ ಸಹಿಸಲಾಗದ ಕಾಂಗ್ರೆಸ್ ರೈತರನ್ನು ಸರಕಾರದ ವಿರುದ್ದ ಎತ್ತಿಕಟ್ಟುವ ಕಾರ್ಯ ನಡೆಸಿದೆ. ಈ ಮಣ್ಣಿನಲ್ಲಿ ಪ್ರಾಮಾಣಿಕವಾಗಿ ಕೃಷಿ ಬದುಕು ನಡೆಸುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ’ ಎಂದು ಕಾಂಗ್ರೆಸ್ ವಿರುದ್ದ ಆರೋಪ ವ್ಯಕ್ತಪಡಿಸಿದರು.

ತಾಂಟುವ ಪ್ರಶ್ನೆ ಇಲ್ಲ
ಕೆಲವು ಪಕ್ಷದವರು ನಮ್ಮ ಶಾಸಕರಿಗೆ `ತಾಂಟು’ವ ಸವಾಲು ಒಡ್ಡಿದ್ದಾರೆ. ಆದರೆ ಬಿಜೆಪಿಗರು ಎಂದಿಗೂ ತಾಂಟುವವರಲ್ಲ. ಸದ್ಯ ದ.ಕ. ಜಿಲ್ಲೆಯಲ್ಲಿ ಶಾಂತಿ ಇದೆ. ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ.

ಕಾರ್ಯಕರ್ತರ ಚುನಾವಣೆ ಉತ್ತಮ ಫಲಿತಾಂಶ ನೀಡಿದೆ
ಗ್ರಾ.ಪಂ. ಚುನಾವಣೋತ್ತರ ಪಕ್ಷದ ಪ್ರಾಬಲ್ಯದ ಬಗ್ಗೆ ಮಾತನಾಡಿದ ಸುದರ್ಶನ್‌ರವರು `ಗ್ರಾ.ಪಂ. ಚುನಾವಣೆ ಪಕ್ಷದ ಕಾರ್ಯಕರ್ತರ ಚುನಾವಣೆ. ಹಾಗಾಗಿ ಪಕ್ಷ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುವಲ್ಲಿ ಪ್ರೋತ್ಸಾಹ ನೀಡಿದೆ. ಅನೇಕ ಹೊಸ ಮುಖಗಳು ಸಮಾಜಕ್ಕೆ ಪರಿಚಯವಾಗಿವೆ. ಅವರ ಗೆಲುವಿಗಾಗಿ ಪಕ್ಷ ಸಾಕಷ್ಟು ದುಡಿದಿದೆ. ನಿರೀಕ್ಷೆಗಿಂತಲೂ ಅಧಿಕ ಫಲಿತಾಂಶ ಸಂತಸ ನೀಡಿದೆ’ ಎಂದರು.

ಭಾರತದ ಬಗ್ಗೆ ಮಕ್ಕಳು ತಿಳಿಯುವಂತಾಗಿದೆ
ಕೇಂದ್ರ ಸರಕಾರದ ಬಜೆಟ್ ಮಂಡನೆ ಬಗ್ಗೆ ಮಾತನಾಡಿದ ಅವರು `ದೇಶದಲ್ಲಿ ಇಂದು ಮೂಲಭೂತವಾಗಿರುವ ಕೃಷಿ, ಶಿಕ್ಷಣ, ಆರೋಗ್ಯ, ಭದ್ರತೆ ಅಭಿವೃದ್ಧಿಯ ಅಂಶಗಳಾಗಿವೆ. ಸರಕಾರ ಈ ಕಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವ ಮೂಲಕ ಭಾರತದ ಪರಂಪರೆ, ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಯಬೇಕಿದೆ. ಮಕ್ಕಳು ವಿದೇಶಿಯನಾಗಿ ಬೆಳೆಯಬಾರದು. ದೇಶದ ಬಗ್ಗೆ ತಿಳಿದುಕೊಳ್ಳುವ ಮಕ್ಕಳು ನಾನು ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳುತ್ತಾರೆ’ ಎಂದರು. ಕಾಂಗ್ರೆಸ್ ಮಹಾತ್ಮ ಗಾಂಧೀಜಿಯವರ ಹೆಸರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿತ್ತು. ಆದರೆ ಅವರ ರಾಮರಾಜ್ಯದ ಕನಸನ್ನು ಈಡೇರಿಸುವ ಪ್ರಯತ್ನ ನಡೆಸಿಲ್ಲ’ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.