HomePage_Banner
HomePage_Banner
HomePage_Banner
HomePage_Banner

ಒಂದೇ ರೂಮಿನಲ್ಲಿದ್ದರೂ ಚಿರತೆ ನಾಯಿಯನ್ನು ಮುಟ್ಟಲಿಲ್ಲ ಯಾಕೆ? – ಚಿರತೆ ತಪ್ಪಿಸಿಕೊಂಡದ್ದಕ್ಕೆ ಅರಣ್ಯ ಇಲಾಖೆಯ ವೈಫಲ್ಯವೇ?

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸಿದ್ದಿಕ್ ಕುಂಬ್ರ

ಬಿಳಿನಲೆ ಗ್ರಾಮದ ಮುಲೆಮನೆಯಲ್ಲಿ ಫೆ. ೩ ರಂದು ಎಲ್ಲೂ ನಡೆಯದ ಘಟನೆಯೊಂದು ನಡೆದಿದೆ, ಆಹಾರದ ಭೇಟೆಗಾಗಿ ಕಾಡಿನಿಂದ ನಾಡಿಗೆ ಬಂದ ಚಿರತೆ ನಾಯಿಯನ್ನು ಭೇಟೆಯಾಡುವ ವೇಳೆ ನಾಯಿ ಮತ್ತು ಚಿರತೆ ಶೌಚಾಲಯದೊಳಗೆ ಬಂಧಿಯಾಗಿದೆ. ಈ ಸುದ್ದಿ ದೊಡ್ಡ ಸುದ್ದಿಯಾಗಿತ್ತು. ಸುಮಾರು ಗಂಟೆಗಳ ಕಾಲ ಚಿರತೆ ಮತ್ತು ನಾಯಿ ಒಂದೇ ಕೋಣೆಯೊಳಗೆ ಇದ್ದರೂ ತನ್ನ ಪ್ರೀತಿಯ ಆಹಾರವಾದರೂ ನಾಯಿಯನ್ನು ಚಿರತೆ ಮುಟ್ಟಲೇ ಇಲ್ಲ. ಇದಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆ ಪ್ರತೀಯೊಬ್ಬರಲ್ಲೂ ಇದೆ. ಚಿರತೆ ನಾಯಿಯನ್ನು ಮುಟ್ಟದೇ ಇರಲು ಅನೇಕ ಕಾರಣಗಳನ್ನು ಬೇರೆ ಬೇರೆ ರೂಪದಲ್ಲಿ ಅಭಿಪ್ರಾಯಿಸುವವರೂ ಇದ್ದಾರೆ. ಅದಕ್ಕಿಂದ ಮಿಗಿಲಾಗಿ ನಾಯಿಯ ಅವಸ್ಥೆ ಹೇಗಿದ್ದಿರಬಹುದು ಎಂಬುದನ್ನು ಊಹಿಸಿ ಅಚ್ಚರಿ ವ್ಯಕ್ತಪಡಿಸಿದವರೂ ನಮ್ಮೊಳಗಿದ್ದಾರೆ. ಏನೇ ಇರಲಿ. ಬಂದ ಚಿರತೆ ಅದರ ಪಾಡಿಗೆ ತನ್ನ ಚಾಣಾಕ್ಷತೆಯಿಂದ ಮತ್ತೆ ಕಾಡಿಗೆ ತೆರಳಿದೆ. ನಾಯಿ ಬದುಕಿದೆಯಾ ಬಡ ಜೀವ ಎಂದು ಮನೆಯಂಗಳದಲ್ಲೇ ಇದೆ. ಆದರೆ ಚಿರತೆ ನಾಯಿಯನ್ನು ಏಕೆ ತಿನ್ನದೇ ಬಿಟ್ಟಿತು ಎಂಬುದಕ್ಕೆ ಉತ್ತರವೂ ಇದೆ.

ಬೋನಿಗೆ ಬಿದ್ದ ಚಿರತೆ..!
ಈ ಹಿಂದೆ ಇದೇ ಚಿರತೆಯನ್ನು ಬೋನಿನಲ್ಲಿ ಇಲಾಖೆಯ ಸಿಬಂದಿಗಳು ಬಂಧಿಸಿರಬಹುದು. ಸಾಧಾರಣವಾಗಿ ಚಿರತೆಯನ್ನು ಬೋನಿಗೆ ಬೀಳಿಸುವಾಗ ಬೋನಿನ ಒಂದು ಮೂಲೆಯಲ್ಲಿ ನಾಯಿಯನ್ನು ಕಟ್ಟಿ ಹಾಕುತ್ತಾರೆ. ನಾಯಿ ಚಿರತೆಗೆ ಅತ್ಯಂತ ಪ್ರಿಯವಾದ ಆಹಾರವಾದ ಕಾರಣ ನಾಯಿಯನ್ನು ಕಂಡ ಕ್ಷಣವೇ ಚಿರತೆ ಬೋನಿಗೆ ಬರುತ್ತದೆ ಆ ವೇಳೆ ಅದನ್ನು ಬಂಧಿಸಲಾಗುತ್ತದೆ. ಮೊನ್ನೆ ಬಿಳಿನೆಲೆಗೆ ಬಂದ ಚಿರತೆಯೂ ಈ ಹಿಂದೆ ಬೋನಿಗೆ ಬಿದ್ದಿರುವ ಸಾಧ್ಯತೆ ಇದೆ. ಶೌಚಾಲಯದೊಳಗೆ ಬಂಧಿಯಾದಾಗ ತಾನು ಬೋನಿಗೆ ಬಿದ್ದಿದ್ದೇನೆ ಎಂಬ ಕಾರಣಕ್ಕೆ ನಾಯಿಯನ್ನು ಮುಟ್ಟುವ ಗೋಜಿಗೆ ಹೋಗದೇ ಇರುವ ಸಾಧ್ಯತೆ ಹೆಚ್ಚು. ನಾಯಿಯೊಂದು ಮೂಲೆಯಲ್ಲಿ ಕುಳಿತುಕೊಂಡಿದೆ, ಚಿರತೆ ಇನ್ನೊಂದು ಮೂಲೆಯಲ್ಲಿ ಮಲಗಿರುವುದು ಸ್ಪಷ್ಟವಾದ ಕಾರಣ ಈ ಊಹೆಯೂ ತಪ್ಪಾಗಲಾರದು. ಶೌಚಾಲಯದ ಬಳಿ ಬೋನು ಇರಿಸಿ ಚಿರತೆಯನ್ನು ಬೋನಿಗೆ ಬೀಳಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಮಾಡಿದ್ದಾರೆ. ಆದರೆ ಚಿರತೆ ಮಾತ್ರ ತಪ್ಪಿಸಿಕೊಂಡಿದೆ. ಇದಕ್ಕೆ ಯಾರು ಹೊಣೆ ಎನ್ನುವುದಕ್ಕಿಂತ ಚಿರತೆಯನ್ನು ಚಾಣಾಕ್ಷಣೆ ಮತ್ತು ಕ್ರೌರ್ಯವನ್ನು ಬಲ್ಲವರು ಉತ್ತರವನ್ನೇ ಅವರೇ ಕಂಡುಕೊಳ್ಳುತ್ತಾರೆ.

ಚಿರತೆ ಬಹಳ ಚಾಣಾಕ್ಷತೆಯಿಂದ ಕೂಡಿದ ಪ್ರಾಣಿಯಾಗಿದೆ. ಅಷ್ಟು ಸುಲಭದಲ್ಲಿ ಅದನ್ನು ಹಿಡಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬಂದಿಗಳು ಅದನ್ನು ಬೋನಿಗೆ ಬೀಳಿಸಲು ಈ ಹಿಂದೆ ಅನೇಕ ಕಡೆಗಳಲ್ಲಿ ಸಾಧ್ಯವಾಗದೆ ಚಿರತೆ ಮತ್ತೆ ಕಾಡಿಗೆ ತೆರಳಿದ ಪ್ರಸಂಗಗಳೂ ಅನೇಕ ಕಡೆಗಳಲ್ಲಿ ನಡೆದಿದೆ.

ಇಲಾಖೆಯ ವೈಫಲ್ಯವೇ?
ಸಾಧಾರಣವಾಗಿ ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ಬಂದು ಅವು ಊರಲ್ಲಿ ದಾಂದಲೆ ಮಾಡಿದರೆ ಅರಣ್ಯ ಇಲಾಖೆಯವರನ್ನು ಜನ ಜವಾಬ್ದಾರರನ್ನಾಗಿಸುವುದು ಮಾಮೂಲಿ ವಿಚಾರವಾಗಿದೆ. ಕಾಡಿಂದ ಬಂದ ಕಾಡಾನೆ, ಕಾಡು ಕೋಣ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳನ್ನು ನಾಡಿಂದ ಓಡಿಸಬಹುದು ಅಥವಾ ಬೋನಿಗೆ ಹಾಕಿ ಅದನ್ನು ಬಂಧಿಸಬಹುದು. ಆ ಮೂಲಕ ಅವುಗಳನ್ನು ಮತ್ತೆ ಕಾಡಿಗೇ ಬಿಡಲಾಗುತ್ತದೆ. ಕೊಲ್ಲುವ ಅಧಿಕಾರ ಅಧಿಕಾರಿಗಳಿಗೂ ಇಲ್ಲ ಜನರಿಗೂ ಇಲ್ಲ. ಕಾಡಿನ ಅಂಚಿನಲ್ಲಿ ಮನೆ ಮಾಡಿಕೊಂಡ ಅನೇಕ ಕುಟುಂಬಗಳಿಗೆ ಇಂಥಹ ವಿಚಾರ ಸಾಮಾನ್ಯ ಸಂಗತಿಯಾಗಿರುತ್ತದೆ. ಬಿಳಿನೆಲೆ ಸಮೀಪ ಕಾಡಿನಿಂದ ಚಿರತೆ ನಾಡಿಗೆ ಬಂದಿದೆ, ಶೌಚಾಲಯದೊಳಗೆ ಬಿದ್ದಿದೆ, ತಪ್ಪಿಸಿಕೊಂಡು ಮತ್ತೆ ಅದೇ ಕಾಡಿಗೆ ತೆರಳಿದೆ. ಬೋನಿನಲ್ಲಿ ಬಂಧಿಸಿದರೂ ಅದನ್ನು ಬೇರೆ ಕಡೆ ಕಾಡಿಗೆ ಬಿಡುವುದೇವಿನ ಕಾಡು ಪ್ರಾಣಿಗಳನ್ನು ಬಂಧಿಸಿಡುವ ಶಾಲೆಗಳೂ ರಾಜ್ಯದಲ್ಲಿ ಎಲ್ಲೂ ಇಲ್ಲ. ಬಿಳಿನೆಲೆ ಗ್ರಾಮಕ್ಕೆ ಬಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬಂಧಿಗಳು ಪ್ರಯತ್ನವನ್ನು ಮಾಡಿದ್ದಾರೆ ಆದರೆ ಅದು ವಿಫಲವಾಗಿದೆ ಎಂದು ಹೇಳಬಹುದು. ಕಾಡುಪ್ರಾಣಿಗಳು ನಾಡಿಗೆ ಬಂದಾಗ ಜನ ತುಂಬಾ ಭಯ ಪಟ್ಟುಕೊಳ್ಳುತ್ತಾರೆ ಯಾಕೆಂದರೆ ಬಂದಿರುವುದು ಕಾಡುಪ್ರಾಣಿಗಳು ಯಾವ ಸಮಯದಲ್ಲಿ ಏನು ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂಬುದು ಜನ ಸಾಮಾನ್ಯನ ದುಗುಡ. ಇದು ನಿಜವೂ ಹೌದು. ಕಾಡುಪ್ರಾಣಿಗಳು ಆಹಾರ ಹುಡುಕಿ ನಾಡಿಗೆ ಬರಲು ನಾವೇ ಕಾರಣರು ಎಂಬುದನ್ನು ನಾವು ಮರೆಯುತ್ತಿದ್ದೇವೆ. ಏನೇ ಆಗಲಿ ಒಂದು ವಿಚಾರವಂತು ಸ್ಪಷ್ಟ ಅದೇನೆಂದರೆ ಕಾಡು ಪ್ರಾಣಿಗಳು ಬೇಟೆಯಾಡುವ ವೇಳೆ ಅಥವಾ ಅದರ ಆಹಾರಕ್ಕೆ ನಾವು ಅಡ್ಡಿ ಮಾಡಿದರೆ ಮಾತ್ರ ಅವು ನಮ್ಮ ಮೇಲೆ ದಾಳಿ ಮಾಡುತ್ತದೆ. ಇದಕ್ಕೆ ಚಿರತೆಯ ಜೊತೆ ರಾತ್ರಿ ಕಳೆದ ನಾಯಿಯೇ ಪ್ರತ್ಯಕ್ಚ ಉಧಾಹರಣೆಯಲ್ಲವೇ..?

ಕಾಡುಪ್ರಾಣಿಗಳು ನಾಡಿಗೆ ಬಂದಾಕ್ಷಣ ಜನ ಭಯದ ವಾತಾವರಣವನ್ನು ಸೃಷ್ಟಿ ಮಾಡಬಾರದು. ನಾಡಿಗೆ ಬಂದ ಪ್ರಾಣಿಗಳು ಅದರಷ್ಟಕ್ಕೆ ಕಾಡಿಗೆ ಹೋಗ್ತವೆ. ಬಿಳಿನೆಲೆಯಲ್ಲಿ ಶೌಚಾಲಯದ ಬಾಗಿಲು ಹಾಕಿದ ಕಾರಣ ಅದು ಕೋಣೆಯೊಳಗೆ ಬಾಕಿಯಾಗಿ ದೊಡ್ಡ ರಾದ್ದಾಂತವಾಗಿದೆ. ಬಾಗಿಲು ಹಾಕದೇ ಇರುತ್ತಿದ್ದರೆ ಅದರ ಪಾಡಿಗೇ ಅದು ರಾತ್ರಿಯೇ ಕಾಡಿಗೆ ಹೋಗುತ್ತಿತ್ತು. ನಾಡಿಗೆ ಕಾಡುಪ್ರಾಣಿಗಳು ಬಂದರೆ ಅದಕ್ಕೆ ಅರಣ್ಯ ಇಲಾಖೆ ಜವಾಬ್ದಾರಿಯಲ್ಲ ನಾವೇ ಜವಾಬ್ದಾರರು ಎಂಬುದನ್ನು ನಾವು ಮರೆಯಬಾರದು. ನಾವು ಪರಿಸರವನ್ನು, ಕಾಡನ್ನು ನಾಶ ಮಾಡುತ್ತಿರುವುದರ ಎಚ್ಚರಿಕೆಯೇ ಇಂಥಹ ಘಟನೆಗಳು ನಡೆಯುತ್ತಿದೆ.
ತೇಜಸ್, ಪರಿಸರ ಪ್ರೇಮಿ, ಪುತ್ತೂರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.