ಪುತ್ತೂರು: ಆರ್ಯಾಪು ಗ್ರಾಮದ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆಯ ಕಿ.೫೯.೮೦ರ ದೇವಸ್ಯ ಎಂಬಲ್ಲಿ ಕಿರಿದಾದ ಸೇತುವೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಬದಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ.
ನಬಾರ್ಡ್ ೨೪ನೇ ಯೋಜನೆಯಡಿ ಮಂಜೂರಾದ ದೇವಸ್ಯದ ಸೇತುವೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಜಮೀನು ತಕರಾರು ಇದ್ದರಿಂದ ಕಾಮಗಾರಿ ನಡೆದಿರಲಿಲ್ಲ. ಇದೀಗ ಖಾಸಗಿ ಜಮೀನುದಾರರು ಇಲಾಖೆಯೊಂದಿಗೆ ಜಮೀನಿನ ನೇರ ಖರೀದಿಗೆ ಒಪ್ಪಿಗೆ ಸೂಚಿಸಿದ್ದರಿಂದ ಕಾಮಗಾರಿ ಆರಂಭಗೊಂಡಿದ್ದು, ಮಾ.೧೫ರ ಒಳಗಾಗಿ ಹೊಸ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಕಾಮಗಾರಿ ನಡೆಯುವ ಸಂದರ್ಭ ವಾಹನ ಸಂಚಾರ ಸ್ಥಗಿತಗೊಳಿಸಬೇಕಾಗದ್ದರಿಂದ ವಾಹನಳಿಗೆ ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಲಘುವಾಹನಗಳು ಬಪ್ಪಳಿಗೆ, ಬಲ್ನಾಡು, ಬೊಬ್ಬಿಲಿ ಅಟ್ಲಾರು ದೇವಸ್ಯ ಮೂಲಕ ಅಥವಾ ಸಂಪ್ಯ ಒಳತ್ತಡ್ಕ ಮುಖಾಂತರ ಸಂಚರಿಸುವುದು. ಘನ ವಾಹನಗಳು ಕಬಕ – ವಿಟ್ಲ- ಉಕ್ಕುಡ- ಮಂಜೇಶ್ವರ ಮುಖಾಂತರ ಸಂಚರಿಸುವುದು ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.