HomePage_Banner
HomePage_Banner
HomePage_Banner
HomePage_Banner

ರೆಂಜಲಾಡಿ ಮಸೀದಿಯಲ್ಲಿ ಹಲ್ಕಾ ದಿಕ್ರ್ ಮಜ್ಲಿಸ್ | ಜೀವನದಲ್ಲಿ ತಪ್ಪು ಸಂಭವಿಸದಂತೆ ಎಚ್ಚರಿಕೆ ವಹಿಸಿ-ರಫೀಕ್ ಫೈಝಿ ಮಾಡನ್ನೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ ಆಶ್ರಯದಲ್ಲಿ ಮಾಸಿಕ ದಿಕ್ರ್ ಹಲ್ಕಾ ಮಜ್ಲಿಸ್ ಫೆ.೪ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯಿತು.

ಮಜ್ಲಿಸ್‌ಗೆ ನೇತೃತ್ವ ನೀಡಿದ ಸ್ಥಳೀಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಮಾತನಾಡಿ ಮನುಷ್ಯರಾದ ನಾವು ತಪ್ಪುಗಳನ್ನು ಮಾಡುವವರಾಗಿದ್ದು ಸಾಧ್ಯವಾದಷ್ಟು ನಮ್ಮ ಜೀವನದಲ್ಲಿ ತಪ್ಪು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ ಪಟ್ಟು ಶುದ್ದ ಬದುಕು ನಡೆಸಲು ಪ್ರಯತ್ನಿಸಬೇಕು ಎಂದು ಹೇಳಿದರು. ದಿಕ್ರ್ ಮಜ್ಲಿಸ್‌ಗಳು ಅಲ್ಲಾಹನ ಸಂಪ್ರೀತಿ ಗಳಿಸುವ ವೇದಿಕೆಯಾಗಿದ್ದು ಅದರಲ್ಲಿ ನಾವು ಭಾಗವಹಿಸುತ್ತಿರಬೇಕು, ಜೀವನದಲ್ಲಿ ಈ ಹಿಂದೆ ಮಾಡಿರುವ ತಪ್ಪುಗಳಿಗೆ ಪಾಶ್ಚಾತ್ತಾಪ ಪಟ್ಟು ಮುಂದಕ್ಕೆ ತಪ್ಪುಗಳನ್ನು ಮಾಡುವುದಿಲ್ಲವೆಂದು ಧೃಢ ನಿರ್ಧಾರ ತೆಗೆದುಕೊಳ್ಳಬೇಕು, ಎಲ್ಲರನ್ನು ಹಾಗೂ ಎಲ್ಲವನ್ನೂ ತಿಳಿದವನು ಅಲ್ಲಾಹು ಮಾತ್ರವಾಗಿದ್ದು ನಾವು ನಿಮಿತ್ತ ಮಾತ್ರ ಹಾಗಾಗಿ ಪರಿಶುದ್ದತೆಯ ಬದುಕು ನಮ್ಮದಾಗಲು ಪ್ರತಿಯೋರ್ವರು ಪ್ರಯತ್ನಿಸಬೇಕು ಎಂದು ರಫೀಕ್ ಫೈಝಿ ಮಾಡನ್ನೂರು ಹೇಳಿದರು.
ಸದರ್ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್, ಮಸೀದಿ ಅಧ್ಯಕ್ಷ ಇಬ್ರಾಹಿಂ ಕಡ್ಯ, ಪ್ರ.ಕಾರ್ಯದರ್ಶಿ ಝೈನುದ್ದೀನ್ ಜೆ.ಎಸ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.