ಪುತ್ತೂರು: ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ – ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈರವರ 70ನೇ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಫೆ.6ರಂದು ಕಡಮಜಲು ಕೃಷಿ ಕ್ಷೇತ್ರದಲ್ಲಿ ಚಾಲನೆ ದೊರಕಿದೆ.
ಬೆಳಿಗ್ಗೆ ನಡೆದ ರೈತ ದಿನಾಚರಣೆಯನ್ನು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಎಂ. ಗಂಗಾಧರ ನೈಕ್ ಉದ್ಘಾಟಿಸಿದರು. ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಸಂಪಿಗೆದಡಿ ದಯಾನಂದ ಆಳ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಬಳಿಕ ರೈತರೊಡನೆ ಸಂವಾದ ಕಾರ್ಯಕ್ರಮ ನಡೆಯಿತು. ಕೃಷಿಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಭಾಸ್ಕರ ರೈ ಮಾದೋಡಿ, ಎ.ಕೆ. ಜಯರಾಮ ರೈ, ರಾಮಕೃಷ್ಣ ಪುಣಚ ಭಾಗವಹಿಸಿದರು.
ಕೊಳಲು ಮಾಂತ್ರಿಕ ಲಿಂಗಪ್ಪ ಗೌಡ ಕಡೆಂಗರವರಿಂದ ಕೊಳಲು ವಾದನ. ಮಾ| ವಿಶಾಲ್ ಮತ್ತು ಕು. ವಿಶಾಖಾ ರವರಿಂದ ಕೊಳಲುವಾದನ ಮತ್ತು ಹಾಡುಗಾರಿಕೆ ನಡೆಯಿತು .
ಮಾ| ನಿತಾಯ್ ಕೃಷ್ಣ ಮೇಂಡ ಬೆಂಗಳೂರು ಇವರಿಂದ ಶ್ರೀಕೃಷ್ಣ ಲೀಲೆ ಯಕ್ಷಗಾನ ನೃತ್ಯರೂಪಕ ನಡೆಯಿತು.