HomePage_Banner
HomePage_Banner
HomePage_Banner
HomePage_Banner

ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗು ಪರಿವಾರ ದೈವಗಳ ಕ್ಷೇತ್ರ ಬುಡೇರಿಯಾದಲ್ಲಿ ವಿಶೇಷ ತಂಬಿಲ,ಶನೈಶ್ಚರ ಕಲ್ಪೋಕ್ತ ಪೂಜೆ,ಆಶ್ಲೇಷ ಬಲಿ ಮತ್ತು ರಂಗಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗು ಪರಿವಾರ ದೈವಗಳಿಗೆ ವಿಶೇಷ ತಂಬಿಲ,ಶನೈಶ್ಚರ ಕಲ್ಪೋಕ್ತ ಪೂಜೆ ಅಶ್ಲೇಷ ಬಲಿ ಮತ್ತು ರಂಗ ಪೂಜೆ ಬ್ರಹ್ಮಶ್ರೀ ವೇ.ಮೂ .ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಕ್ಷೇತ್ರ ಬುಡೇರಿಯಾದಲ್ಲಿ ನಡೆಯಿತು.

ಫೆ.5 ರಂದು ಬೆಳಿಗ್ಗೆ 8:00 ರಿಂದ ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಗಣಪತಿ ಹೋಮ,ನವಗ್ರಹಶಾಂತಿ ಸಹಿತ ಶನಿ ಶಾಂತಿ ಹೋಮ,ಶನೈಶ್ಚರ ಕಲ್ಪೋಕ್ತ ಪೂಜೆ,ನಾಗದೇವರಿಗೆ ನವಕ ಕಲಾಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ,ದೈವಗಳಿಗೆ ಕಲಶ ಪ್ರಧಾನ ಹೋಮ,ಕಲಶಾಭಿಷೇಕ, ತಂಬಿಲ, ಶನಿಶಾಂತಿಯ ಪುರ್ಣಾಹುತಿ ,ಶನಿಕಲ್ಪೋಕ್ತ ಪೂಜೆಯ ಮಹಾಮಂಗಳಾರತಿ ನಡೆದು ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗು ಪರಿವಾರ ದೈವಗಳಿಗೆ ವಿಶೇಷ ತಂಬಿಲ ಹಾಗು ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆ ಯಾಗಿ ಅನ್ನಪ್ರಸಾದ ಭೋಜನ ನಡೆಯಿತು ನಂತರ ಶ್ರೀ ಕ್ಷೇತ್ರ ಬುಡೇರಿಯಾ ಆಲಂಕಾರು ,ಯಕ್ಷಗಾನ ಅಭಿಮಾನಿ ಬಳಗ ಆಲಂಕಾರು ಇವರ ಸಹಕಾರದೊಂದಿಗೆ ಶ್ರೀ ಕ್ಷೇತ್ರದಲ್ಲಿ ಯಕ್ಷ ಗಾನ ವೈಭವ ನಡೆಯಿತು.ಭಾಗವತರಾಗಿ ಪದ್ಯಾಣ ಗಣಪತಿ ಭಟ್,ದಿನೇಶ್ ಅಮ್ಮಣ್ಣಾಯ,ಪುತ್ತಿಗೆ ರಘರಾಮ ಹೊಳ್ಳ, ಕಾವ್ಯಶ್ರೀ ಅಜೇರು,ಚೆಂಡೆ ಮದ್ದಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಶ್ರೀಶಕುಮಾರ್ ನಿಡ್ಲೆ ,ರಾಜೇಂದ್ರ ಕೃಷ್ಣ ಪಂಜಿಗದ್ದೆ, ನಿರೂಪಣೆಯನ್ನುಗಣರಾಜ್ ಕುಂಬ್ಳೆ ನಿರ್ವಹಿಸಿದ್ದರು. ಆನಂತರ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗು ಶಾಲು ನೀಡಿ ಶ್ರಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಸಂಜೆ ಶ್ರೀ ಕ್ಷೇತ್ರದಲಿ ರಂಗಪೂಜೆ ಸಂಕಲ್ಪ ನಡೆದು , ರಾತ್ರಿ ಅಶ್ಲೇಷ ಬಲಿ ,ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ದೈವಗಳಿಗೆ ರಂಗಪೂಜೆ ನಡೆಯಿತು ಆನಂತರ ಅನ್ನಪ್ರಸಾದ ಭೋಜನ ನಡೆಯಿತು .ಆಗಮಿಸಿದ ಭಕ್ತಾಧಿಗಳು ದೈವ ದೇವರ ಗಂಧ ಪ್ರಸಾಧ ಸ್ವೀಕರಿಸಿ ರಂಗಪೂಜೆ ಹಾಗು ಸೇವೆಗಳಲ್ಲಿ ಪಾಲ್ಗೊಂಡು ಪ್ರಸಾಧ ಬೋಜನದಲ್ಲಿ ಪಾಲ್ಗೊಂಡರು.

ಈ ಸಂಧರ್ಭದಲ್ಲಿ ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ,ಸೂರಪ್ಪ ಪೂಜಾರಿ ಹೊಸಮಜಲು ಅರ್ಚಕರಾದ ಅನಂತರಾಮ ಭಟ್ ತೋಟಂತಿಲ ಹಾಗು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.