ಪುತ್ತೂರು: ಶಾಲೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರಾಸ್ಲೈಟ್ನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ತಲುಪಿಸಿ ಚಿನ್ನ ಕಳೆದುಕೊಂಡ ವಿದ್ಯಾರ್ಥಿನಿಗೆ ತಲುಪಿಸುವ ಮೂಲಕ ಈರ್ವರು ವಿದ್ಯಾರ್ಥಿನಿಯರು ಪ್ರಾಮಾಣಕಿತೆ ಮೆರೆದಿದ್ದಾರೆ. ಅಶ್ರಫ್ ಮುಕ್ವೆ ಅವರ ಪುತ್ರಿ ಪುತ್ತೂರು ಸೈಂಟ್ ವಿಕ್ಟರ್ ಇಂಗ್ಲೀಷ್ ಹೈಯರಿ ಪ್ರೈಮರಿ ಸ್ಕೂಲ್ನ ವಿದ್ಯಾರ್ಥಿನಿ ತಾಜುನ್ನಿಸಾ ಅವರು ಚಿನ್ನದ ಬ್ರಾಸ್ಲೈಟ್ ಧರಿಸಿ ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ಬ್ರಾಸ್ಲೈಟ್ನ್ನು ಕಳೆದುಕೊಂಡಿದ್ದರು. ಎಲ್ಲಿ ಬ್ರಾಸ್ಲೈಟ್ ಕಳೆದಿದೆ ಎನ್ನವುದು ತಿಳಿದಿರಲಿಲ್ಲ. ಮರುದಿನ ಅದೇ ಶಾಲೆಯ ವಿದ್ಯಾರ್ಥಿನಿಯರಾದ ಜನ್ಯ ಹಾಗೂ ತಾನಿಯಾ ಅವರು ತಮಗೆ ಶಾಲಾ ಆವರಣದಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರಾಸ್ಲೈಟ್ನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಿದ್ದರು. ನಂತರ ಪರಿಶೀಲಿಸಿದ ಮುಖ್ಯೋಪಾಧ್ಯಾಯರು ಬ್ರಾಸ್ಲೈಟ್ ಕಳೆದು ಹೋಗಿದ್ದ ತಾಜುನ್ನಿಸಾ ಅವರಿಗೆ ನೀಡಿದ್ದಾರೆ. ಶಾಲಾ ಮಕ್ಕಳ ಪ್ರಾಮಾಣಿಕತೆಗೆ ತಾಜುನ್ನಿಸಾ ಅವರ ತಂದೆ ಅಶ್ರಫ್ ಮುಕ್ವೆ ಅಭಿನಂದನೆ ಸಲ್ಲಿಸಿದ್ದಾರೆ.