HomePage_Banner
HomePage_Banner
HomePage_Banner
HomePage_Banner

ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಳ್ಯಪದವುನಲ್ಲಿರುವ ಶ್ರೀ ಅಯ್ಯಪ್ಪ ಭಜನಾ ಮಂದಿರವು ನವೀಕರಣಗೊಂಡು ನಿರ್ಮಾಣಗೊಳ್ಳಲಿದ್ದು ನೂತನ ಭಜನಾ ಮಂದಿರಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಫೆ. ೦೮ ರಂದು ನಡೆಯಿತು. ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಶಬರಿಮಲೆಯ ನೀವೃತ್ತ ಪ್ರಧಾನ ಅರ್ಚಕ ಕುಂಬಳೆ ಗುಂಡಿಹಿತ್ಲು ಬ್ರಹ್ಮಶ್ರೀ ರಾಧಾಕೃಷ್ಣ ಕಡಮಣ್ಣಾಯರವರು ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಈಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ವಹಿಸಿ ಮಾತನಾಡಿ, ಮಂದಿರದ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ನಡೆಯಲು ಎಲ್ಲಾ ಭಕ್ತಾಧಿಗಳು ಸಹಕಾರ ಅಗತ್ಯವಿದೆ. ಎಲ್ಲರೂ ಸಹಕಾರ ನೀಡುವಂತೆ ಕೇಳಿಕೊಂಡು ಶುಭ ಹಾರೈಸಿದರು. ಭಜನಾ ಮಂದಿರದ ಬಗ್ಗೆ ಮನವಿ ಪತ್ರವನ್ನು ಬಿಡುಗಡೆಗೊಳಿಸಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ತಮ್ಮ ಧರ್ಮಿಕ ಭಾಷಣದಲ್ಲಿ,ನಮ್ಮ ಹಿರಿಯರು ನಮಗೆ ಮೂರ್ತಿಯ ಆರಾಧನೆಯನ್ನು ಕಲಿಸಿಕೊಟ್ಟಿದ್ದಾರೆ. ಧರ್ಮಕ್ಕೆ ಅಪಚಾರವಾಗದ ರೀತಿಯಲ್ಲಿ ಹಿರಿಯರು ಆರಾಧಿಸಿಕೊಂಡು ಬಂದಿದ್ದಾರೆ. ನಾವು ಆರಾಧಿಸುವ ಎಲ್ಲಾ ಶಕ್ತಿಗಳು ನಮ್ಮ ಶರೀರದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ನಾವೆಲ್ಲರೂ ಪರಿಶುದ್ಧ ಮನಸ್ಸು, ಹೃದಯದಿಂದ ದೇವರನ್ನು ಆರಾಧಿಸಿದರೆ ಅನುಗ್ರಹ ಪ್ರಾಪ್ತಿ ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅಭ್ಯಾಗತರಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತ ಒಂದು ಆಧ್ಯಾತ್ಮಿಕ ದೇಶವಾಗಿದೆ. ದೇವಸ್ಥಾನ,ದೈವಸ್ಥಾನ ಎಲ್ಲವೂ ಆಧ್ಯಾತ್ಮಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದರಿಂದ ನಮ್ಮ ಬದುಕು ಆರಂಭವಾಗಿದೆ. ಇವುಗಳಿಲ್ಲದೆ ನಮ್ಮ ಬದುಕಿಲ್ಲ. ನಮ್ಮ ಸಂಪ್ರದಾಯ, ಆಚಾರ, ವಿಚಾರಗಳು ನಮ್ಮನ್ನು ಎಲ್ಲಿದ್ದರೂ ನಾವು ಭಾರತೀಯ ಎಂಬುದನ್ನು ಗುರುತಿಸಿ ಹೇಳುವಂತಾಗಿದೆ. ಭಾರತದ ಕೃಷಿ ಮತ್ತು ಋಷಿ ಪರಂಪರೆಯಿಂದ ನೆಮ್ಮದಿಯ ಜೀವನ ಸಾಧ್ಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಅತಿಥಿಯಾಗಿದ್ದ ಜಿಲ್ಲಾ ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ತಾಯಂದಿರುವ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ದೇವರ ಮೇಲಿನ ಭಕ್ತಿ, ನಮ್ಮ ಆಚಾರ, ವಿಚಾರಗಳನ್ನು ಕಲಿಸಬೇಕು, ದೇವರ ಮೇಲಿನ ಭಕ್ತಿಯೇ ಜ್ಞಾನದ ಆರಂಭವಾಗಿದೆ. ಕಷ್ಟ ಬಂದಾಗ ಮಾತ್ರ ದೇವರ ಮೇಲೆ ಭಕ್ತಿ ತೋರಿಸುವುದು ಅಲ್ಲ, ಪ್ರತಿ ದಿನ ದೇವರ ಆರಾಧನೆ ಮಾಡಿದರೆ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗಲು ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಕೃಷ್ಣ ಬೋರ್ಕರ್ ಮಾತನಾಡಿ, ಅಯ್ಯಪ್ಪನ ಮಂದಿರದ ನಿರ್ಮಾಣ ಮಾಡುವುದಾಗಲಿ, ಅದಕ್ಕೆ ಜಾಗವನ್ನು ಬಿಟ್ಟುಕೊಡುವ ವಿಚಾರವಾಗಲಿ ಎಲ್ಲವೂ ಸ್ವಾಮೀ ಅಯ್ಯಪ್ಪನ ಆಶೀರ್ವಾದದಿಂದ ನಡೆಯುತ್ತಿದೆ. ಇದೊಂದು ಪುಣ್ಯದ ಕೆಲಸವಾಗಿದೆ ಇದು ಎಲ್ಲರಿಗೂ ಸಿಗಲು ಸಾಧ್ಯವಿಲ್ಲ ಎಂದರು. ಭಜನೆಯಿಂದ ವಿಭಜನೆ ಇಲ್ಲ. ಎಲ್ಲಿ ಭಜನೆ ನಡೆಯುತ್ತದೋ ಅಲ್ಲಿ ನಾವು ದೇವರನ್ನು ನೇರವಾಗಿ ಕಾಣಲು ಸಾಧ್ಯವಿದೆ ಭಜನೆಗೆ ಅಂತಹ ಶಕ್ತಿ ಇದೆ ಎಂಬುದನ್ನು ನಾವು ಪುರಾಣಗಳಿಂದಲೂ ತಿಳಿದುಕೊಳ್ಳಬಹುದು ಆದ್ದರಿಂದ ನಾವೆಲ್ಲರೂ ಭಜನೆ ಮಾಡುವ ಮೂಲಕ ದೇವರನ್ನು ಕಾಣುವ ಪ್ರಯತ್ನ ಮಾಡೋಣ ಎಂದು ಹೇಳಿ ಶುಭ ಹಾರೈಸಿದರು.

ಶ್ರೀ ಅಯ್ಯಪ್ಪ ಭಜನಾಮಂದಿರ ಆಡಳಿತ ಸಮಿತಿ ಗೌರವಾಧ್ಯಕ್ಷ ಇಂದಾಜೆ ಪ್ರಭಾಕರ ನಾಯಕ್ ಮಂಗಳೂರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಅಯ್ಯಪ್ಪ ಭಜನಾಮಂದಿರ ಗುರುಸ್ವಾಮಿ ಚಿನ್ನಪ್ಪ ಎನ್ ಶುಭ ಹಾರೈಸಿದರು. ಬಡಗನ್ನೂರು ಗ್ರಾ ಪಂ ಸದಸ್ಯರಾದ ವೆಂಕಟೇಶ್ ಕನ್ನಡ್ಕ, ಕೆ, ಪದ್ಮನಾಭ ಕೆ, ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯ ನಾಗರಾಜ್ ಭಟ್ ಕನ್ನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ ಮನವಿ ಪತ್ರ ವಾಚಿಸಿದರು. ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಡಾ.ಮೋಹನದಾಸ್ ರೈ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ವಂದಿಸಿದರು. ಮುಖ್ಯಶಿಕ್ಷಕ ಸತ್ಯನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.