ಪುತ್ತೂರು: ಕೊಡಿಪ್ಪಾಡಿಯ ಪಾರ್ಮ್ ಹೌಸ್ವೊಂದರಲ್ಲಿ ಸ್ನೇಹಿತರೊಬ್ಬರ ಬೀಳ್ಕೊಡುಗೆ ಪಾರ್ಟಿಯ ಬಳಿಕ ಯುವತಿಯ ಮೇಲೆ ಬಲತ್ಕಾರ ನಡೆದ ಕುರಿತು ನೊಂದ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಘಟನೆ ಫೆ. 6ರಂದು ನಡೆದಿದ್ದು ತಡವಾಗಿ ವರದಿಯಾಗಿದೆ.
ಮೂಲತಃ ಜಾರ್ಖಾಂಡ್ನವರಾಗಿದ್ದು, ಮಂಗಳೂರು ಬ್ಯಾಂಕ್ವೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ನೊಂದವರಾಗಿದ್ದಾರೆ. ಅವರು ಸ್ನೇಹಿತರೊಬ್ಬರ ವರ್ಗಾವಣೆಗೆ ಸಂಬಂಧಿಸಿ ಪುತ್ತೂರಿನ ಕೊಡಿಪ್ಪಾಡಿಯಲ್ಲಿರುವ ಪಾರ್ಮ್ ಹೌಸ್ಗೆ ಪಾರ್ಟಿಗೆಂದು ಬಂದ ವೇಳೆ ಸ್ನೇಹಿತರ ಜೊತೆಗಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ನೊಂದ ಯುವತಿಯೇ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಫೆ.8ರಂದು ಒರ್ವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ:
ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಾಯಿಲಿನ್ ಪಿಂಟೋ ಎಂಬಾತನಿಗೆ ಅಂಡಮಾನ್ ಗೆ ವರ್ಗಾವಣೆಯಾಗಿಯಾಗಿರುವ ಹಿನ್ನಲೆಯಲ್ಲಿ ದಿನಾಂಕ 05.02.2021 ರಂದು ರಾತ್ರಿ ಆತ ಆಯೋಜಿಸಿದ್ದ ಬೀಳ್ಕೊಡುಗೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಆತನ ಸ್ನೇಹಿತೆ ಬ್ಯಾಂಕ್ ಉದ್ಯೋಗಿಯಾಗಿರುವ ಸಂತ್ರಸ್ಥ ಯುವತಿಯು ಆಕಾಶ್ ಸೆರಾವೊ ಎಂಬಾತನ ಮಾಲಕತ್ವದ ಕೊಡಿಪ್ಪಾಡಿಯ ವಿಶ್ರಾಂತಿ ಗೃಹಕ್ಕೆ ಬಂದಿದ್ದು, ಸದ್ರಿ ಸಮಯ ಪಾರ್ಟಿಯಲ್ಲಿ ಸುಮಾರು 17 ರಿಂದ 20 ಜನರು ಪಾಲ್ಗೊಂಡಿರುತ್ತಾರೆ. ಪಾರ್ಟಿ ಮುಗಿದ ಬಳಿಕ ಉಳಿದವರು ತೆರಳಿದ್ದು, ತಡರಾತ್ರಿಯಾಗಿರುವುದರಿಂದ ಸಂತ್ರಸ್ಥ ಯುವತಿ ಮತ್ತು ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಸೇರಿ ಒಟ್ಟು 04 ಜನರು ಸದರಿ ವಿಶ್ರಾಂತಿ ಗೃಹದಲ್ಲೇ ಉಳಿದುಕೊಂಡಿರುತ್ತಾರೆ. ಸಂತ್ರಸ್ಥ ಯುವತಿ ಅಲ್ಲೇ ರೂಮೊಂದರಲ್ಲಿ ಮಲಗಿದ್ದು, ಬೆಳಿಗ್ಗೆ 05.00 ಗಂಟೆಗೆ ಸುಮಾರಿಗೆ ಆರೋಪಿ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತನು ಪಿರ್ಯಾಧಿರವರ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ಥ ಯುವತಿ ನೀಡಿರುವ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 328, 376 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.