HomePage_Banner
HomePage_Banner
HomePage_Banner
HomePage_Banner

ಬಜತ್ತೂರು: ಮನೆಯೊಳಗೆ ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮನೆಯೊಳಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮಹಿಳೆಯೋರ್ವರು ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಶಿಬಾರ್ಲ ಎಂಬಲ್ಲಿ ನಡೆದಿದೆ.

ಬಜತ್ತೂರು ಗ್ರಾಮದ ಶಿಬಾರ್ಲ ನಿವಾಸಿ ರತ್ನಾಕರ ಪೂಜಾರಿಯವರ ಪತ್ನಿ ಪ್ರೇಮ(೫೦ವ.)ಮೃತಪಟ್ಟ ದುರ್ದೈವಿ ಮಹಿಳೆ. ಇವರು ಜ.೩೧ರಂದು ಮನೆಯೊಳಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದರು. ಮನೆಯವರು ತಕ್ಷಣ ಇವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆತಂದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತ ಪ್ರೇಮರವರು ಬಜತ್ತೂರು ಮುದ್ಯ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮಾಜಿ ಅಧ್ಯಕ್ಷೆಯಾಗಿದ್ದು ಬಜತ್ತೂರು ಮುದ್ಯ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ಗುರುತಿಸಿಕೊಂಡಿದ್ದರು. ಮೃತರು ಪತಿ, ಕಾಂಚನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ರತ್ನಾಕರ ಪೂಜಾರಿ ಹಾಗೂ ಪುತ್ರಿಯರಾದ ಅಶ್ವಿನಿ, ಅಶ್ವಿತರನ್ನು ಅಗಲಿದ್ದಾರೆ.

ಮೃತರ ಕುಟುಂಬಸ್ಥರಾಗಿರುವ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶೇಖರ ಪೂಜಾರಿ ಶಿಬಾರ್ಲ, ಕೆಎಂಎಫ್ ಉದ್ಯೋಗಿ ಪುಷ್ಪರಾಜ್ ಹಾಗೂ ಇತರರು ಅಂತ್ಯಸಂಸ್ಕಾರಕ್ಕೆ ಸಹಕರಿಸಿದರು. ಮೃತರ ಮನೆಗೆ ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೋಮಸುಂದರ, ಕಾರ್ಯದರ್ಶಿ ಶಶಿಧರ ಮುದ್ಯ, ಪಡ್ಪು ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ವಸಂತ ಗುಡ್ಡೆತ್ತಡ್ಕ, ಕಾರ್ಯದರ್ಶಿ ಸದಾನಂದ ಶಿಬಾರ್ಲ, ಮಾಜಿ ಅಧ್ಯಕ್ಷ ಗೋಪಾಲ ಕೆಎಸ್‌ಆರ್‌ಟಿಸಿ ವಳಾಲು ದಡ್ಡು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರವಿ, ಸೇವಾಪ್ರತಿನಿಧಿ ಮಮತಾ ನೀರಕಟ್ಟೆ, ಮುದ್ಯ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಅನಿತಾ ಪಿಜಕ್ಕಳ, ವಳಾಲು ಒಕ್ಕೂಟದ ಅಧ್ಯಕ್ಷ ಧನಂಜಯ ಬೆದ್ರೋಡಿ, ಪ್ರಮುಖರಾದ ಮಹೇಂದ್ರ ವರ್ಮ ಪಡ್ಪು, ನಾರಾಯಣ ನೀರಕಟ್ಟೆ,ಪೂವಪ್ಪ ಪೂಜಾರಿ ಕೊಡಿಪಾನ, ಅಂಗನವಾಡಿ ಕಾರ್ಯಕರ್ತೆ ಕೋಮಲಾಕ್ಷಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.