ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿಯು ಘೋಷಣೆಯಾಗಿದ್ದು ಇದೀಗ ತಾಲೂಕಿನ 22 ಗ್ರಾಮ ಪಂಚಾಯತ್ಗಳ ಪೈಕಿ ನೆಟ್ಟಣಿಗೆ ಮುಡ್ನೂರು ಹಾಗೂ ಬಡಗನ್ನೂರು ಗ್ರಾ.ಪಂ ಹೊರತು ಪಡಿಸಿ ಉಳಿದ 20 ಪಂಚಾಯತ್ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ಘೋಷಣೆಯಾಗಿದೆ.
ಪಂಚಾಯತ್ನ ಮೊದಲ 30 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಆಯ್ಕೆಗೆ ಸಂಬಂಧಿಸಿ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಆಯಾ ಪಂಚಾಯತ್ಗಳಿಗೆ ನೇಮಕಗೊಂಡು ಚುನಾವಣಾಧಿಕಾರಿಗಳೇ ಆಯ್ಕೆಗೆ ದಿನಾಂಕವನ್ನು ನಿಗದಿಗೊಳಿಸಿದ್ದಾರೆ. ಈಗಾಗಲೇ ನಿಗದಿಪಡಿಸಿದಂತೆ ಫೆ.12ರಿಂದ ಪ್ರಾರಂಭಗೊಂಡು ಫೆ.19ರ ತನಕ ವಿವಿಧ ಗ್ರಾಮ ಪಂಚಾಯತ್ಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಬಡಗನ್ನೂರು ಹಾಗೂ ನೆಟ್ಟಣಿಗೆಮುಡ್ನೂರು ಗ್ರಾ.ಪಂಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ದಿನಾಂಕ ಅಂತಿಮಗೊಂಡಿಲ್ಲ. ಉಳಿದ 20 ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನಾಂಕಗಳು ಈ ಕೆಳಗಿನಂತಿವೆ.
ಕಬಕ ಫೆ.16, ಕುಡಿಪ್ಪಾಡಿ ಫೆ.15, ಬನ್ನೂರು ಫೆ.18, ಕೋಡಿಂಬಾಡಿ ಫೆ.19, 34 ನೆಕ್ಕಿಲಾಡಿ ಫೆ.12, ಉಪ್ಪಿನಂಗಡಿ ಫೆ.17, ಹಿರೇಬಂಡಾಡಿ ಫೆ.18, ಬಜತ್ತೂರು ಫೆ.19, ಬಲ್ನಾಡು ಫೆ.17, ಆರ್ಯಾಪು ಫೆ.15, ನರಿಮೊಗರು ಫೆ.16, ಕೆದಂಬಾಡಿ ಫೆ.19, ಕೆಯ್ಯೂರು ಫೆ.17, ಮುಂಡೂರು ಫೆ.18, ಒಳಮೊಗರು ಫೆ.15, ಬೆಟ್ಟಂಪಾಡಿ ಫೆ.16, ಪಾಣಾಜೆ ಫೆ.17, ಅರಿಯಡ್ಕ ಫೆ.12, ನಿಡ್ಪಳ್ಳಿ ಫೆ.15, ಕೊಳ್ತಿಗೆ ಫೆ.18ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.