ಪುತ್ತೂರು: ಸಿಹಿ ಸಿಹಿಯಾದ ತಿಂಡಿ ತಿನಿಸುಗಳು ಅನುಭವಕ್ಕೆ ಸಿಹಿಯಾಗುವುದರೊಂದಿಗೆ ಸಂಬಂಧದಲ್ಲೂ ಅಮರ ಪ್ರೇಮದ ಸಂಕೇತವಾಗಿದೆ. ಹಾಗಾಗಿಯೇ ಪ್ರೇಮ ಎಂದರೆ ಘಮ ಘಮ.. ಸುದೀರ್ಘ ೪೨ ವರ್ಷಗಳ ಬೇಕರಿ ತಯಾರಿಕಾ ಅನುಭವದೊಂದಿಗೆ ಪುತ್ತೂರಿನ ಹಾಗೂ ಹತ್ತೂರಿನ ಗ್ರಾಹಕರ ಮನ-ಮನೆ ಗೆದ್ದ ಪ್ರೇಮ ಬೇಕರಿ ದರ್ಬೆ ಶ್ರೀ ಲಕ್ಷ್ಮಿ ಕಮರ್ಷಿಯಲ್ ಸೆಂಟರ್ನಲ್ಲಿ ತನ್ನ ಮೂರನೇ ಶಾಖೆಯನ್ನು ತೆರೆದು ವಿಶ್ವಾಸಪೂರ್ಣ ಗ್ರಾಹಕ ಸೇವೆಯ ಜೊತೆಗೆ ಮೂರನೇ ವರ್ಷಕ್ಕೆ ಫೆ. ೧೧ ರಂದು ಪಾದಾರ್ಪಣೆ ಮಾಡುತ್ತಿದೆ.
`ಪ್ರೇಮ’ದೊಂದಿಗೆ ಪ್ರೀತಿ ಮಧುರವಾಗಿರಲಿ
೧೯೭೭ರಲ್ಲಿ ಪರ್ಲಡ್ಕದಲ್ಲಿ ಚಿಕ್ಕದಾಗಿ ಆರಂಭಗೊಂಡ ಪ್ರೇಮ ಬೇಕರಿ ಇಂದು ಸಂಸ್ಥೆಗಳ ವಿಸ್ತರಣೆಯೊಂದಿಗೆ ಗ್ರಾಹಕರ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಶುಚಿ-ರುಚಿಗೆ ಆದ್ಯತೆಯೊಂದಿಗೆ ಸ್ನೇಹಮಯಿ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಗ್ರಾಹಕರ ಹತ್ತಿರವಾಗಿದೆ. ಉತ್ಕೃಷ್ಟ ಗುಣಮಟ್ಟದ ರುಚಿಭರಿತ ಸಿಹಿತಿಂಡಿ, ಖಾರ ತಿಂಡಿ ಹಾಗೂ ಕೇಕ್ ತಯಾರಿಕೆಯಲ್ಲಿ ತನ್ನದೇ ಆದ ಸ್ವಾದವನ್ನು ಹೊಂದಿದೆ. ದರ್ಬೆ ಹಾಗೂ ಕೋರ್ಟ್ರಸ್ತೆಯಲ್ಲಿ ಶಾಖೆಗಳನ್ನು ಹೊಂದಿದೆ.
ಪರ್ಲ್ಸಿಟಿ ಬೆಸ್ಟ್ ಬೇಕರಿ ಅವಾರ್ಡ್ ಪಡೆದಿರುವ ಪ್ರೇಮ ಬೇಕರಿಯು ಸಿಹಿತಿಂಡಿ, ಬಿಸ್ಕಟ್ಸ್, ಕೇಕ್ಸ್, ಖಾರ ತಿಂಡಿ, ಸ್ಯಾಂಡ್ವಿಚ್, ಪಪ್ಸ್, ಜ್ಯೂಸ್ ಐಟಂಗಳಿಗೆ ಹೆಸರುವಾಸಿಯಾಗಿದೆ. ಗ್ರಾಹಕರ ವಿಶ್ವಾಸಕ್ಕೆ ಪೂರಕವಾಗಿ ಪ್ರೇಮ ಬೇಕರಿ ತನ್ನ ಹಿಂದಿನ ಗುಣಮಟ್ಟದ ಸ್ವೀಟ್ ಖಾರ ಐಟಂಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಗ್ರಾಹಕರ ಮನದಿಚ್ಛೆಯಂತೆ ಪ್ರತೀ ಬಾರಿ ಏನಾದರೂ ವಿಶೇಷ ಐಟಂಗಳನ್ನು ಆರಂಭಿಸುತ್ತಿದ್ದೇವೆ. ಮೂರನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಈ ಬಾರಿ ಬಹಳ ವಿಶೇಷವಾದ ಬಿಸ್ಕಟ್ ಟೀ ಆರಂಭಿಸುತ್ತಿದ್ದೇವೆ ಎಂದು ಸಂಸ್ಥೆಯ ಮ್ಹಾಲಕರಾದ ಕೆ.ಎಂ. ವಾಸು ಹಾಗೂ ವಿನೋದ್ ಕೆ.ಎಂ. ತಿಳಿಸಿದ್ದಾರೆ.
ಚಹಾವೂ ಕುಡಿಯಿರಿ.. ಚಹಾ ಕಪ್ ನ್ನೂ ತಿನ್ನಿರಿ..
ಇದೇನು ಬಿಸ್ಕತ್ ಚಾ… ಹೆಸರಲ್ಲೇ ಇದೆ.. ಚಹಾ ಸೇವಿಸುವುದೇ ಬಿಸ್ಕತ್ ಕಪ್ನಲ್ಲಿ.. ಚಹಾ ಕುಡಿಯುವಾಗ ಕಪ್ ಆಗಿರುವ ಬಿಸ್ಕತ್ ಚಹಾ ಮುಗಿದ ಕೂಡಲೇ ಟೇಸ್ಟೀ ಬಿಸ್ಕತ್ ಆಗಿ ತಿನ್ನೋಕೆ ರೆಡಿಯಾಗ್ತದೆ. ಸದ್ಯ ಇಂತಹ ಬಿಸ್ಕತ್ ಟೀ ದೊಡ್ಡ ದೊಡ್ಡ ಮಾಲ್ಗಳಲ್ಲಿ ಮಾತ್ರ ದೊರೆಯುತ್ತಿದೆ. ಜಿಲ್ಲೆಯಲ್ಲಿಯೇ ವಿಶೇಷ ಎನಿಸಬಹುದಾದ ಈ ಟೀ ಇನ್ನುಮುಂದೆ ದರ್ಬೆಯ ಪ್ರೇಮ ಬೇಕರಿಯಲ್ಲಿ ಕುಳಿತು ಆರಾಮವಾಗಿ ಕುಡಿಯಬಹುದು.. ಪ್ಲಾಸ್ಟಿಕ್ ಕಪ್ ವಿಲೇವಾರಿ ಸಮಸ್ಯೆ, ಸ್ಟೀಲ್ ಗ್ಲಾಸ್ ಸ್ವಚ್ಛತೆಯ ಸಮಸ್ಯೆ.. ಆದರೆ ಚಹಾದ ಜೊತೆ ತಿಂದು ಮುಗಿಸುವ ಬಿಸ್ಕತ್ ಕಪ್ ಮಾತ್ರ ಯಾವ ಸಮಸ್ಯೆಯನ್ನೂ ತಂದೊಡ್ಡಲ್ಲ.. ಚಹಾ ಕುಡಿದವನೇ ಕಪ್ ನ್ನು ತಿಂದುಮುಗಿಸಿಬಿಡ್ತಾರೆ.. ಹೇಗಿರುತ್ತೆ ಈ ಬಿಸ್ಕತ್ ಚಾ ಟೇಸ್ಟ್ ಅಂತಿರಾ..? ಹಾಗಾದ್ರೆ ಫೆ. ೧೧ ರಿಂದ ಸಂಜೆಯ ವೇಳೆಗೆ ದರ್ಬೆಯ ಪ್ರೇಮ ಬೇಕರಿಗೆ ಒಮ್ಮೆ ಭೇಟಿ ಕೊಡಬಹುದಾಗಿದೆ.