HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ ವಲಯ ರಕ್ಷಿತಾರಣ್ಯದಲ್ಲಿ ತನಿಖೆ ನಡೆಸಿದಷ್ಟು ಬೆಳಕಿಗೆ ಬರುತ್ತಿದೆ ಮರಗಳ್ಳತನ ! – ಉನ್ನತಾಧಿಕಾರಿಗಳಿಂದ ತನಿಖೆ ನಡೆದರೆ ಮಾತ್ರ ಸತ್ಯ ಹೊರ ಬರಲು ಸಾಧ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಸುಬ್ರಹ್ಮಣ್ಯ ರಕ್ಷಿತಾರಣ್ಯದಲ್ಲಿ ಮರಗಳ್ಳತನದ ವ್ಯಕ್ತಿಯೊಬ್ಬರು ದೂರು ನೀಡಿ. ಬಳಿಕ ಮಂಗಳೂರು ಸಂಚಾರಿ ದಳದ ಅಧಿಕಾರಿಗಳಿಂದ ತನಿಖೆ ನಡೆದಿದ್ದು, ಬಳಿಕ ದೂರುದಾರರು ಮತ್ತಷ್ಟು ಮರಗಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ಮರಗಳು ಕಾಣೆಯಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ. ಇಷ್ಟೊಂದು ದೊಡ್ಡ ಪ್ರಕರಣವಾಗಿದ್ದರೂ ವಲಯ ಅರಣ್ಯಧಿಕಾರಿ ಸ್ತರದ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ಸಂಶಯಕ್ಕೆ ಕಾರಣವಾಗುತ್ತಿದೆ. ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳು ಮಧ್ಯಪ್ರವೇಶಿಸದಿದ್ದರೆ ಇದೊಂದು ಕಾಟಚಾರದ ತನಿಖೆಯಾಗಿ ಪ್ರಕರಣ ಹಳ್ಳ ಹಿಡಿಯುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.

ಮರ ಲೂಟಿಯಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಶಾಮೀಲು ಆರೋಪ
ರಕ್ಷಿತಾರಣ್ಯದಲ್ಲಿ ಈಗಾಗಲೇ ಈ ಮರ ಕಳ್ಳತನ ದಂದೆ ಕಳೆದ ಹಲವಾರು ತಿಂಗಳುಗಳ ಹಿಂದೆಯೇ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸುಬ್ರಹ್ಮಣ್ಯ ವಲಯದ ಐತ್ತೂರು ಸುಂಕದಕಟ್ಟೆ, ಬಿಳಿನೆಲೆ, ಕೊಣಾಜೆ, ಮುಜೂರು ಮುಂತಾದ ರಕ್ಷಿತಾರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಬೀಟೆ, ಸಾಗುವಾನಿ, ಬೇಂಗ, ಹೆಬ್ಬಲಸು, ಬೋವು ಹಾಗೂ ಇನ್ನೀತರ ಕಾಟು ಜಾತಿಯ ಮರಗಳನ್ನು ಕಡಿದು ಸಾಗಿಸಲಾಗಿದೆ, ಅಲ್ಲದೆ ಹಲವಾರು ಮರಗಳನ್ನು ಕಡಿದು ಹಾಕಿರುವುದು ಕಂಡು ಬಂದಿದೆ, ಇಷ್ಟೊಂದು ಪ್ರಮಾಣದಲ್ಲಿ ಮರ ಸಾಗಾಟ ಆಗಬೇಕಿದ್ದರೆ ಇದರಲ್ಲಿ ಇಲಾಖೆಯವರ ಕೈವಾಡ ಇರಬಹುದು ಎಂಬ ಬಲವಾದ ಸಂಶಯ ಬರುತ್ತಿದೆ. ಅಲ್ಲದೆ ಮರ ಕಳ್ಳತನದ ಬಗ್ಗೆ ದೂರು ನೀಡಿರುವ ವ್ಯಕ್ತಿಯೂ ಕೂಡ ಹಲವು ಅಧಿಕಾರಿಗಳ ಹೆಸರು(ಹಿಂದೆ ಕರ್ತವ್ಯ ನಿರ್ವಹಿಸಿದ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ) ದೂರಿನಲ್ಲಿ ಉಲ್ಲೇಖಿಸಿ ಕಡಿದ ಮರಗಳನ್ನು ಕೇರಳ ಭಾಗಕ್ಕೆ ಹಾಗೂ ಸ್ಥಳೀಯ ಮಿಲ್ಲುಗಳಿಗೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿಯನ್ನು ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಅರಣ್ಯಾಧಿಕಾರಿಗಳು ಶಾಮೀಲಾಗಿದ್ದರೋ ಅಥಾವ ಇಲ್ಲವೋ ಎಂಬುದು ಖಚಿತವಾಗದಿದ್ದರೂ ಅಷ್ಟೋಂದು ಮರ ಕಳ್ಳತನ ಆಗಿರುವುದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗುತ್ತದೆ.


ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆಗೆ ಆಗ್ರಹ
ಈಗಾಗಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಅರಣ್ಯ ಲೂಟಿ ನಡೆದಿದ್ದರೂ, ಉನ್ನತ ಮಟ್ಟದ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ, ಆದರೆ ಇಷ್ಟು ದೊಡ್ಡ ಮಟ್ಟದ ಪ್ರಕರಣ ತನಿಖೆಯನ್ನು ವಲಯ ಮಟ್ಟದ ಅಧಿಕಾರಿಯೊಬ್ಬರು ಇಲಾಖೆಗೆ ಪ್ರಾಥಮಿಕ ವರದಿ ಮಾಡುತ್ತಿರುವುದರಲ್ಲಿಯೂ ಸಂಶಯ ವ್ಯಕ್ತವಾಗಿದೆ, ಯಾಕೆಂದರೆ ಈ ಮರ ಕಳವಿನ ಬಗ್ಗೆ ದೂರುದಾರರೊಬ್ಬರು ಸಾಕ್ಷ ಸಮೇತ ಲಿಖಿತ ದೂರು ನೀಡಿದ್ದರೂ ಸ್ಥಳಕ್ಕೆ ಬರಲು ಕೆಲವು ದಿನಗಳೇ ಆಗಿದೆ. ಶನಿವಾರ ಸ್ಥಳಕ್ಕೆ ಬರುವುದಾಗಿ ತಿಳಿಸಿ ಇಡಿ ದಿನ ದೂರುದಾರರನ್ನು ಕಾಯಿಸಿ ಮತ್ತೆ ಸೋಮವಾರ ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ ಅಧಿಕಾರಿ ಮಧ್ಯಾಹ್ನ ತನಕವೂ ಆಗಮಿಸದಿರುವುದು ಮತ್ತು ಬಂದ ಬಳಿಕವೂ ಮಾಧ್ಯಮದವರು ಬರುವುದಾದರೆ ನಾವು ಬರುವುದಿಲ್ಲ, ನಿಮ್ಮ ಮೇಲೆ ಅತಿಕ್ರಮಣ ಕೇಸು ಆಗುತ್ತದೆ ಎಂಬ ಬೆದರಿಕೆಗಳನ್ನು ಹಾಕಿ ಮಾಧ್ಯಮದವರೊಂದಿಗೆ ದರ್ಪ ತೋರಿದ ಘಟನೆಯೂ ನಡೆದಿತ್ತು. ಈ ಎಲ್ಲ ಅಂಶಗಳಿಂದ ಈ ತನಿಖಾಧಿಕಾರಿಯವರು ಎಷ್ಟರ ಮಟ್ಟಿಗೆ ಮರ ಕಳ್ಳತನದ ವರದಿ ಕೊಡುತ್ತಾರೆಂಬ ಸಂಶಯ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಬಿಳಿನೆಲೆಯಲ್ಲಿ ಮರ ಕಡಿದ ಪ್ರಕರಣ ಪತ್ತೆ -ಎಚ್ಚೆತ್ತುಕೊಂಡ ಅಧಿಕಾರಿಗಳಿಂದ ಮರಕ್ಕೆ ಸೀಲ್!
ಐತ್ತೂರು ಭಾಗದಲ್ಲಿ ಮರ ಕಳ್ಳತನ ಆಗಿರುವ ವಿಚಾರಗಳು ಬೆಳಕಿಗೆ ಬರುತ್ತಿದ್ದಂತೆ ಬಿಳಿನೆಲೆ ರಕ್ಷಿತಾರಣ್ಯದಲ್ಲಿ ಮರ ಕಡಿದ ಪ್ರಕರಣಕ್ಕೆ ತಡವಾಗಿ ಅರಣ್ಯಾಧಿಕಾರಿಗಳು ಮರವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಈ ಮರವನ್ನು ಏಳೆಂಟು ದಿನಗಳ ಹಿಂದೆಯೇ ಕಡಿಯಲಾಗಿದ್ದರೂ ಈ ಮಾಹಿತಿ ಅರಣ್ಯ ಇಲಾಖೆಗೆ ಗೊತ್ತಿತ್ತೆ ಅಥಾವ ಇಲ್ಲವೇ ಎಂಬ ಮಾಹಿತಿ ಲಭ್ಯವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.