ಪುತ್ತೂರು:ಬೈಕೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜ.೨೦ರಂದು ಪುತ್ತೂರು ವಲಯ ಅಬಕಾರಿ ಉಪನಿರೀಕ್ಷಕರು ಹಆಗೂ ಸಿಬಂದಿಗಳು ಗಸ್ತು ನಿರತರಾಗಿದ್ದ ವೇಳೆ ರಾತ್ರಿ ೮.೧೦ರ ಸುಮಾರಿಗೆ ಸಾಲ್ಮರ ರೈಲ್ವೇ ಗೇಟ್ ಬಳಿಯ ಅಶ್ವತ್ಥಕಟ್ಟೆ ಎಂಬಲ್ಲಿ ಬೈಕೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಮಾಡಿದ್ದರು.ತಾವು ಬರುವುದನ್ನು ಗಮನಿಸಿ ಬೈಕ್ ಸವಾರ ಬೈಕನ್ನು ಅಡ್ಡಹಾಕಿ ಓಡಿ ಹೋಗಿ ಪರಾರಿಯಾಗಿದ್ದು ಬೈಕ್ನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ೪೯ ಬಾಟಲಿ ಪ್ರೆಸ್ಟೀಜ್ ವಿಸ್ಕಿಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದರು.ಪರಾರಿಯಾಗಿದ್ದ ಬೈಕ್ (ಕೆ.ಎ.೧೯-ಎಕ್ಸ್:೬೬೩೯)ಸವಾರ ಬಂಟ್ವಾಳ ಪೆರ್ನೆ ಕಾರ್ಲ ಮನೆ ಡೇವಿಡ್ ಪಿಂಟೋ ಎಂಬವರ ಮಗ ಪಿಯಾದ್ ಪಿಂಟೋ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಪರಾರಿಯಾಗಿರುವ ಆರೋಪಿ ಪಿಯಾದ್ ಪಿಂಟೋ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲ ಗ್ರೆಗೋರಿ ಡಿಸೋಜಾ ವಾದಿಸಿದ್ದರು.