ವಿಟ್ಲ: ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅನ್ವರ್ ಕರೋಪಾಡಿ, ಉಪಾಧ್ಯಕ್ಷರಾಗಿ ಚೆನ್ನಪ್ಪ ರವರು ಆಯ್ಕೆಯಾಗಿದ್ದಾರೆ.
ಕರೋಪಾಡಿ ಗ್ರಾಮ ಪಂಚಾಯತ್ ನ ಒಟ್ಟು 16 ಸ್ಥಾನಗಳಲ್ಲಿ ಕಾಂಗ್ರೆಸ್ 10 ಹಾಗೂ ಬಿಜೆಪಿ 6 ಸ್ಥಾನ ಪಡೆದುಕೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಟಿ ಮೀಸಲಾತಿ ಘೋಷಣೆಯಾಗಿತ್ತು. ಅದರಂತೆ ಆಯ್ಕೆ ಪ್ರಕ್ರಿಯೆ ನಡೆದಿದೆ.
ಅನ್ವರ್ ಕರೋಪಾಡಿ ರವರು ವರ್ಷಗಳ ಹಿಂದೆ ಹತ್ಯೆಯಾಗಿದ್ದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ರವರ ಸಹೋದರರಾಗಿದ್ದಾರೆ.