ಪುತ್ತೂರು: ಬಡಗನ್ನೂರು ಗ್ರಾಮ ಪಂಚಾಯತನ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನರೇಗಾ ಮಾಹಿತಿ ಕಾರ್ಯಕ್ರಮ ಹಾಗು ಫೆಬ್ರವರಿ ತಿಂಗಳ ರೋಜ್ಗಾರ್ ದಿವಸ್ ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸ್ವಉದ್ಯಮಕ್ಕೆ ಪೂರಕವಾದ ನರೇಗಾ ಕಾಮಗಾರಿಗಳ ಮಾಹಿತಿ ನೀಡಿ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ ಮಾಹಿತಿ ನೀಡಲಾಯಿತು. ಬಳಿಕ ಸದಸ್ಯರೊಂದಿಗೆ ಯೋಜನೆಯ ಕುರಿತು ಮುಕ್ತ ಸಂವಾದ ನಡೆಸಲಾಯಿತು. ಸದಸ್ಯರು ತಾವೇ ಕಾಯಕ ಸಂಘವೊಂದನ್ನು ರಚಿಸಿ ಸಮುದಾಯಿಕ ಪೌಷ್ಟಿಕ ಕೈತೋಟ, ಕಾಲುವೆ ಹೂಳೆತ್ತುವಿಕೆ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಲು ಆಸಕ್ತಿ ತೋರಿ ಬೇಡಿಕೆಯನಿಟ್ಟರು. ಮಹಿಳಾ ಫಲಾನುಭವಿಗಳಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು. ಹೊಸ ಕಾಮಗಾರಿಗಳಿಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಂಜೀವಿನಿ ಯೋಜನೆ, ಪಿಂಚಣಿ ಯೋಜನೆಗಳ ಮಾಹಿತಿಯನ್ನು ನೀಡಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ, ತಾ.ಪಂನ ಎನ್ಆರ್ಎಲ್ಎಮ್ ಸಂಯೋಜಕಿ ನಮಿತಾ, ಗ್ರಾ.ಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾ.ಪಂ ಸಿಬ್ಬಂದಿಗಳು, ವಿವಿಧ ಸ್ವ ಸಹಾಯ ಗುಂಪುಗಳ ಮಹಿಳೆಯರು ಉಪಸ್ಥಿತರಿದ್ದರು.