ಕಡಬ: ಸಮಸ್ತ ಕೇರಳ ಸುನ್ನೀ ಬಾಲವೇದಿ ಆತೂರು ರೇಂಜ್ ಇದರ ನೂತನ ಸಮಿತಿ ರೇಂಜ್ ಅಧ್ಯಕ್ಷ ಕೆ.ಎಂ.ಹೆಚ್. ಫಾಝಿಲ್ ಹನೀಪಿ ಕೊಯಿಲರವರ ಅಧ್ಯಕ್ಷತೆಯಲ್ಲಿ ಪೆರಿಯಡ್ಕ ಮದ್ರಸ ಹಾಲ್ನಲ್ಲಿ ನಡೆಯಿತು. ಅಬೂಸ್ವಾಲಿಹ್ ಝೈನಿ ಕಾರ್ಯಕ್ರಮ ಉದ್ಘಾಟಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎಸ್ ಫೈಝಿ ಆತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಚ್ .ಇಸ್ಹಾಕ್ ಕೌಸರಿ ಆತೂರು ವಿಷಯ ಮಂಡಿಸಿದರು. ಹಾರಿಸ್ ಕೌಸರಿ ಕೋಲ್ಪೆ ನೂತನ ಸಮಿತಿ ರಚಿಸಿದರು.
ಎಸ್ಕೆಎಸ್ಬಿವಿ ಆತೂರು ರೇಂಜ್ ಅಧ್ಯಕ್ಷರಾಗಿ ಅಂರಾಝ್ ಆತೂರುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಅಫ್ಝಲ್ ಆತೂರು, ಕೋಶಾಧಿಕಾರಿಯಾಗಿ ಫಝಲ್ ಗಂಡಿಬಾಗಿಲು, ಉಪಾಧ್ಯಕ್ಷರಾಗಿ ಅಪ್ನಾನ್ ನೀರಾಜೆ, ಅಮೀನ್ ಕುದ್ಲೂರು ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಸ್ಲಂ ಕೊಯಿಲ, ಹಾತಿಪ್ ಕೆಮ್ಮಾರ, ಜಿಲ್ಲಾ ಕೌನ್ಸಿಲರ್ ಝಮೀರ್ ಆತೂರು ಮತ್ತು ರಬೀಹ್ ಪೆರಿಯಡ್ಕ, ಸದಸ್ಯರಾಗಿ ಅಬ್ಬಾಸ್ ಕುಂಡಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪರ್ಹಾನ್ ಕೆಮ್ಮಾರ, ಮನಾಫ್ ಆತೂರುಬೈಲು, ಶಾಹಿನ್ ಕುದ್ಲೂರು, ಶಬೀಬ್ ನೀರಾಜೆ, ಅಬೂಬಕ್ಕರ್ ಗಂಡಿಬಾಗಿಲು, ಫಹೀಂ ಕುಂಡಾಜೆ, ಫಝಲ್ ಕೊಯಿಲ, ಮುಹೀನುದ್ದೀನ್ ಪೆರಿಯಡ್ಕ ಆಯ್ಕೆಯಾದರು.
ರೇಂಜ್ ಪರೀಕ್ಷಾ ಮಂಡಳಿ ಚೆಯರ್ಮ್ಯಾನ್ ಅಬ್ದುಲ್ ರಝ್ಹಾಕ್ ದಾರಿಮಿ ನೀರಾಜೆ ಹಾಗೂ ರೇಂಜ್ ಕಾರ್ಯದರ್ಶಿ ಬದ್ರುದ್ದೀನ್ ಮುಸ್ಲಿಯಾರ್ ಆತೂರುಬೈಲು ಮಾತನಾಡಿದರು.
ಜಿಲ್ಲಾ ಕೌನ್ಸಿಲರ್ ಸಿದ್ದೀಕ್ ನೀರಾಜೆ, ಮುನೀರ್ ಅನ್ವರಿ ಕುಂಡಾಜೆ, ಅಬ್ದುಲ್ಲಾ ಮುಸ್ಲಿಯಾರ್ ಕೆಮ್ಮಾರ, ಮಕ್ಬೂಲ್ ಫೈಝಿ ಗಂಡಿಬಾಗಿಲು, ರಝಾಕ್ ದಾರಿಮಿ ನೀರಾಜೆ, ಮುಹಮ್ಮದ್ ಮುಸ್ಲಿಯಾರ್ ಕುದ್ಲೂರು ಉಪಸ್ಥಿತರಿದ್ದರು. ಎಸ್ಕೆಎಸ್ಬಿವಿ ಚೆಯರ್ಮ್ಯಾನ್ ಅಶ್ರಫ್ ರಹ್ಮಾನಿ ಕುದ್ಲೂರು ಸ್ವಾಗತಿಸಿ, ಕನ್ವೀನರ್ ಇಬ್ರಾಹಿಂ ಕೌಸರಿ ಆತೂರುಬೈಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.