ಪುತ್ತೂರು; ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಹರ್ಷ ಜಿ.ಗುತ್ತು ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ನಾಯ್ಕ ಪುಡಿಂಕಲಡ್ಕರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಯ್ಕೆ ನಡೆಸಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹರ್ಷರವರನ್ನು ವೆಂಕಪ್ಪ ಗೌಡ ಸೂಚಿಸಿ, ಮೋನಪ್ಪ ಗೌಡ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಶ್ವನಾಥ ನಾಯ್ಕರವರನ್ನು ಜಾನಕಿ ಸೂಚಿಸಿ, ಹರ್ಷರವರು ಅನುಮೋದಿಸಿದ್ದರು.
ನಿರ್ದೇಶಕರಾದ ಸುಂದರ ಗೌಡ, ಬಾಲಾಕ್ಷಿ, ಲಲಿತ, ಭವಾನಿ, ಶಾರದಾ, ಹೇಮಾವತಿ,ಉದಯ ಕುಮಾರ್, ಜಯರಾಮ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು. ಕಾರ್ಯದರ್ಶಿ ಸವಿತಾ ಹಾಗೂ ಹಾಲು ಪರೀಕ್ಷಕ ಈಶ್ವರ ಮೂಲ್ಯ ಸಹಕರಿಸಿದರು.