HomePage_Banner
HomePage_Banner
HomePage_Banner
HomePage_Banner

ಫೆ.13ರಂದು ಕಾವುನಲ್ಲಿ ಪಂಚಾಮೃತ ಸಹಕಾರಿ ಮಾರ್ಟ್‌ನ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಪಂಚಾಮೃತ ಸಹಕಾರಿ ಮಾರ್ಟ್ ಫೆ.೧೩ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್‌ರವರು ಸಹಕಾರಿ ಮಾರ್ಟ್‌ನ ಉದ್ಘಾಟನೆ ನೆರವೇರಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಚಿನ್ನ ಖರೀದಿ ಯೋಜನೆಯ ಪತ್ರ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ. ಜಯರಾಮ ರೈಯವರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.

ಒಂದೇ ಸೂರಿನಡಿ ದಿನಬಳಕೆಯ ಎಲ್ಲಾ ವಸ್ತುಗಳು:
ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘದ ನೇತೃತ್ವದಲ್ಲಿ ಶುಭಾರಂಭ ಮಾಡುತ್ತಿರುವ ಪಂಚಾಮೃತ ಸಹಕಾರಿ ಮಾರ್ಟ್‌ನಲ್ಲಿ ಗ್ರಾಹಕರಿಗೆ ದಿನಬಳಕೆಯ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ. ಎಲ್ಲಾ ವರ್ಗದ ಗ್ರಾಹಕರಿಗೂ ಅನುಕೂಲವಾಗುವಂತಹ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳಾದ ಜಿನಸು ಸಾಮಾಗ್ರಿ, ತಾಜಾ ತರಕಾರಿ, ಹಣ್ಣು ಹಂಪಲುಗಳು, ಹಾಲಿನ ಉತ್ಪನ್ನಗಳು, ಮಸಾಲ ಪದಾರ್ಥಗಳು ಅಲ್ಲದೇ ಲೇಖನ ಸಾಮಾಗ್ರಿಗಳು, ತಂಪು ಪಾನೀಯಗಳು, ಐಸ್‌ಕ್ರೀಂ, ಬೇಕರಿ ತಿನಸುಗಳು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಶುಭಾರಂಭದ ದಿನದಂದು ಗ್ರಾಹಕರಿಗಾಗಿ ರೂ.೫೦೦ರ ಮೇಲ್ಪಟ್ಟ ಖರೀದಿಗೆ ಅದೃಷ್ಟ ಕೂಪನ್ ನೀಡಿ ಸಂಜೆ ಲಕ್ಕಿ ಡ್ರಾವು ನಡೆಯಲಿದೆ, ಜತೆಗೆ ಪ್ರತಿ ತಿಂಗಳಲ್ಲಿ ಒಂದು ಬಾರಿ ಲಕ್ಕಿ ಡ್ರಾ ನಡೆಸಿ ಅದೃಷ್ಟವಂತರಿಗೆ ಆಕರ್ಷಕ ಬಹುಮಾನ ನೀಡುವ ಯೋಜನೆ ಹಾಕಿಕೊಂಡು ಸಹಕಾರಿ ಮಾರ್ಟ್‌ನ್ನು ಗ್ರಾಹಕ ಸ್ನೇಹಿಯಾಗಿ ರೂಪಿಸಲಿದ್ದೇವೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.