HomePage_Banner
HomePage_Banner
HomePage_Banner
HomePage_Banner

ಉಳಿಪ್ಪು: ಬಾಲ ಕಲಾವಿದ ಆಲಂಕಾರಿನ ಲಕ್ಷ್ಮೀಶಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಮರ್ದಾಳ: ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ಬಳ್ಳಿತ್ತಡ್ಡ ಎಂಬಲ್ಲಿ ನಡೆದ ನೇಮೋತ್ಸವದ ಸಂದರ್ಭದಲ್ಲಿ ಆಲಂಕಾರು ಗ್ರಾಮದ ಶರವೂರು ನಿವಾಸಿ ವಾದ್ಯ ವಾದಕ ತಿಮ್ಮಪ್ಪರವರ ಪುತ್ರ , ಬಾಲ ಕಲಾವಿದ ಲಕ್ಷ್ಮೀಶರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಾಲಕ ಲಕ್ಷ್ಮೀಶ ಕೊಳಲುವಾದನ, ವಾದ್ಯ, ಠಾಸೆ ನುಡಿಸುವುದರ ಜೊತೆಗೆ ದೈವ ನರ್ತನ ಸೇವೆಯೂ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈತನನ್ನು ಊರಿನ ಹಿರಿಯ ಪಟೇಲ್ ಸೀತಾರಾಮ ಹೆಬ್ಬಾರ್, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕರುಣಾಕರ ಗೋಗಟೆಯವರು ಅಭಿನಂದಿಸಿ ಸನ್ಮಾನಿಸಿದರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಾಂಕ ಗೋಖಲೆಯವರು ಶುಭಹಾರೈಸಿದರು. ಕಿರಣ್ ಗೋಖಲೆ, ದಿನಕರ್ ಹೆಬ್ಬಾರ್, ಕಾಶಿನಾಥ್ ಗೋಗಟೆ, ದೈವಜ್ಷರಾದ ಕೇಶವ ಪಾಲ್ತಿಮಾರು, ಮಧ್ಯಸ್ಥ ಧನು, ಕುಟ್ರುಪ್ಪಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ವಿದ್ಯಾ ಗೋಖಲೆ, ಮನೆ ಯಜಮಾನ ಹೊನ್ನಪ್ಪ ಗೌಡ, ಮೇದಪ್ಪ ಗೌಡ ಉಳಿಪ್ಪು ಸೇರಿದಂತೆ ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.